ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಚೀನಾ ಪರ ಬೇಹುಗಾರಿಕೆ: ಚಿಂತಕರ ಚಾವಡಿ ನಡೆಸುತ್ತಿದ್ದ ಜರ್ಮನಿಯ ವ್ಯಕ್ತಿ ಬಂಧನ

ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ನಡೆಸುತ್ತಿದ್ದ ವ್ಯಕ್ತಿಯೋರ್ವ ವರ್ಷಗಳ ಕಾಲ ಚೀನಾದ ಗುಪ್ತಚರ ಇಲಾಖೆಗೆ ಮಾಹಿತಿದಾರನಾಗಿದ್ದ ಆರೋಪದಡಿ ಜರ್ಮನಿಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಬಂಧನ (ಸಾಂಕೇತಿಕ ಚಿತ್ರ)
Srinivas Rao BV
Updated On : 6 Jul 2021, 5:15 pm

ಬರ್ಲಿನ್: ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ನಡೆಸುತ್ತಿದ್ದ ವ್ಯಕ್ತಿಯೋರ್ವ ವರ್ಷಗಳ ಕಾಲ ಚೀನಾದ ಗುಪ್ತಚರ ಇಲಾಖೆಗೆ ಮಾಹಿತಿದಾರನಾಗಿದ್ದ ಆರೋಪದಡಿ ಜರ್ಮನಿಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

ಜರ್ಮನ್ ನ ಪ್ರಾಸಿಕ್ಯೂಟರ್ ಗಳು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಬಂಧಿತ ಶಂಕಿತ ವ್ಯಕ್ತಿಯನ್ನು ಡಾ. ಕಲೌಸ್ ಎಲ್ ಎಂದು ಗುರುತಿಸಲಾಗಿದ್ದು, ಮ್ಯೂನಿಚ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆ ಸಲ್ಲಿಸಿದ ಬಳಿಕ ಬಂಧಿಸಲಾಗಿದೆ. 

ರಾಜಕೀಯ ವಿಜ್ಞಾನಿಯಾಗಿದ್ದ ಡಾ. ಕಲೌಸ್ ಎಲ್ 2001 ರಿಂದ ಥಿಂಕ್ ಟ್ಯಾಂಕ್ ನ್ನು ನಡೆಸುತ್ತಿದ್ದರು. ಡಾ.ಕಲೌಸ್ 2010 ರಲ್ಲಿ ಶಾಂಘೈ ಗೆ ತೆರಳಿದ್ದಾಗ ಚೀನಾದ ಗುಪ್ತಚರ ಇಲಾಖೆಯವರು ಅವರನ್ನು ಸಂಪರ್ಕಿಸಿದ್ದರು. 

Advertisement

Advertisement

2019 ವರೆಗೂ ಬಹುರಾಷ್ಟ್ರೀಯ ಶೃಂಗಸಭೆ ಅಥವಾ ಇತರ ರಾಷ್ಟ್ರಗಳ ನಾಯಕರ ಭೇಟಿಯ ಕುರಿತು ಚೀನಾ ಗುಪ್ತಚರ ಇಲಾಖೆಯವರಿಗೆ ಮಾಹಿತಿ ನೀಡುತ್ತಿದ್ದ ಆರೋಪವನ್ನು ಡಾ.ಕಲೌಸ್ ಎದುರಿಸುತ್ತಿದ್ದಾರೆ. ಚೀನಾದ ಗುಪ್ತಚರ ಉದ್ಯೋಗಿಗಳೊಂದಿಗೆ ಭೇಟಿ ಮಾಡಿದಾಗಲೆಲ್ಲಾ ಹಣ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement