ಡಾ.ರಾಹುಲ್ ಗುಪ್ತಾ, ಡಾ. ಅತುಲ್ ಗವಾಂಡೆ 
ವಿದೇಶ

ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕದ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷ ಜೋ ಬೈಡನ್ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಕ ಮಾಡಿದ್ದಾರೆ. 

ವಾಷಿಂಗ್ ಟನ್: ಅಮೆರಿಕದ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷ ಜೋ ಬೈಡನ್ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಕ ಮಾಡಿದ್ದಾರೆ. ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿದ್ದ ಡಾ. ರಾಹುಲ್ ಗುಪ್ತಾ ಅವರನ್ನು ಜೋ ಬೈಡನ್ ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.

ಶಸ್ತ್ರಚಿಕಿತ್ಸಕರಾಗಿರುವ ಡಾ. ಅತುಲ್ ಗವಾಂಡೆ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾದ ಏಜೆನ್ಸಿಯ ಜಾಗತಿಕ ಆರೋಗ್ಯ ವಿಭಾಗದ ಸಹಾಯಕ ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ. 

25 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಗುಪ್ತಾ ಅವರಿಗೆ ಇಬ್ಬರು ಗೌರ್ನರ್ ಗಳ ಅವಧಿಯಲ್ಲಿ ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. 

ರಾಜ್ಯದ ಮುಖ್ಯ ಆರೋಗ್ಯ ಅಧಿಕಾರಿಯಾಗಿ ಡಾ.ಗುಪ್ತಾ ಅವರು ಹಲವಾರು ಒಪಿಯಾಡ್ ಬಿಕ್ಕಟ್ಟು ಸ್ಪಂದನೆ ಪ್ರಯತ್ನಗಳ ನೇತೃತ್ವವವನ್ನು ವಹಿಸಿದ್ದು, ನಜಾತ ಶಿಶುಗಳಲ್ಲಿ ಕಂಡುಬರುವ ನಿಯೋನೇಟಲ್ ಆಬ್ಸ್ಟಿನೆನ್ಸ್ ಸಿಂಡ್ರೋಮ್ ಗೆ ತುತ್ತಾಗಲು ಅತಿ ಹೆಚ್ಚು ಅಪಾಯ ಹೊಂದಿರುವ ಮಕ್ಕಳನ್ನು ಗುರುತಿಸಲು ಬರ್ತ್ಕ್ಸೋರ್ ಯೋಜನೆಯನ್ನು ರೂಪಿಸುವುದು ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಪ್ರವರ್ತಕರೆಂದೇ ಖ್ಯಾತಿ ಪಡೆದಿದ್ದಾರೆ.

ಎಬೋಲಾ ವೈರಾಣು ಭೀತಿಯ ಸಂದರ್ಭದಲ್ಲಿ ರಾಜ್ಯದ ಝಿಕಾ ಕ್ರಿಯಾ ಯೋಜನೆಯ ಅಭಿವೃದ್ಧಿಯ ನೇತೃತ್ವವನ್ನೂ ಗುಪ್ತಾ ಅವರು ವಹಿಸಿಕೊಂಡಿದ್ದು ಗಮನಾರ್ಹವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಗುಪ್ತಾ ಅವರು ಹಲವು ಸಂಘಟನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಇನ್ನು ಭಾರತದ ರಾಯಭಾರಿಯ ಪುತ್ರರಾಗಿರುವ ರಾಹುಲ್ ಜನಿಸಿದ್ದು ಭಾರತದಲ್ಲಿ. ವಾಷಿಂಗ್ ಟನ್ ಡಿಸಿಯ ಉಪನಗರಗಳಲ್ಲಿ ಬೆಳೆದ ಇವರು, 21 ನೇ ವಯಸ್ಸಿನಲ್ಲಿ ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದರು.

ಅಲಬಾಮಾ-ಬರ್ಮಿಂಗ್ಹ್ಯಾಮ್ ನ ವಿವಿಯಿಂದ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಹುಲ್, ಲಂಡನ್ ಸ್ಕೂಲ್ ಅಫ್ ಬ್ಯುಸಿನೆಸ್& ಫೈನಾನ್ಸ್ ನ ವಿಭಾಗದಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT