ಆಫ್ಗಾನ್ ಭದ್ರತಾ ಪಡೆ 
ವಿದೇಶ

ಕಳೆದ 24 ತಾಸಿನಲ್ಲಿ 193 ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿದ ಆಫ್ಘಾನಿಸ್ತಾನ್ ಭದ್ರತಾ ಪಡೆ

ಫ್ಘಾನಿಸ್ತಾನದಲ್ಲಿ ಕಳೆದ 24 ತಾಸಿನಲ್ಲಿ ಭದ್ರತಾ ಪಡೆಗಳು 193 ತಾಲಿಬಾನ್‍ ಉಗ್ರರನ್ನು ಹತ್ಯೆಗೈದಿದ್ದು, 13 ಐಇಡಿಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್‍ ಅಮಾನ್‍ ತಿಳಿಸಿದ್ದಾರೆ. 

ಕಾಬೂಲ್‍: ಆಫ್ಘಾನಿಸ್ತಾನದಲ್ಲಿ ಕಳೆದ 24 ತಾಸಿನಲ್ಲಿ ಭದ್ರತಾ ಪಡೆಗಳು 193 ತಾಲಿಬಾನ್‍ ಉಗ್ರರನ್ನು ಹತ್ಯೆಗೈದಿದ್ದು, 13 ಐಇಡಿಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್‍ ಅಮಾನ್‍ ತಿಳಿಸಿದ್ದಾರೆ. 

ಕಳೆದ 24 ತಾಸಿನಲ್ಲಿ ಪಕ್ತಿಕಾ, ಘಜ್ನಿ, ಕುನಾರ್, ನಗರ್ ಹರ್, ಕಂದಹಾರ್, ಜಬುಲ್‍, ಹೆರಾತ್, ಬಡ್ಗಿಸ್‍, ಹೆಲ್ಮಂಡ್‍, ನಿಮೃಜ್‍, ಬಲಾಖ್‍, ಸಮನ್‍ ಗನ್‍, ಜೊವ್‍ ಜಾನ್‍, ಟಕಾರ್ ಮತ್ತು ಕುಂಡುಜ್‍ ಪ್ರಾಂತ್ಯಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ 193 ಉಗ್ರರು ಹತರಾಗಿದ್ದು, ಇತರ 74 ಉಗ್ರರು ಗಾಯಗೊಂಡಿದ್ದಾರೆ ಎಂದು ಅಮಾನ್‍ ಟ್ವೀಟ್ ಮಾಡಿದ್ದಾರೆ. 

ಹೆಲ್ಮಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಆಸ್ಪತ್ರೆಯೊಂದನ್ನು ದೋಚಿ, ನಂತರ ಅದನ್ನು ನಾಶಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಟ್ವೀಟ್‍ ನೊಂದಿಗೆ ಆಸ್ಪತ್ರೆಯ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT