ವಿದೇಶ

ಪಾಕಿಸ್ತಾನದಲ್ಲಿ ಆಫ್ಘನ್ ರಾಯಭಾರಿ ಮಗಳನ್ನು ಅಪಹರಿಸಿ, ಚಿತ್ರಹಿಂಸೆ

Srinivasamurthy VN

ಇಸ್ಲಾಮಾಬಾದ್: ಪಾಕಿಸ್ತಾನಲ್ಲಿರುವ ಆಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಆಫ್ಘಾನಿಸ್ತಾನ ಸರ್ಕಾರ ಗಂಭೀರ ಆರೋಪ ಮಾಡಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆಫ್ಘಾನಿಸ್ತಾನ ಸರ್ಕಾರ, 'ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಅಂದರೆ ಜುಲೈ 16ರಂದು ಅಫ್ಘಾನಿಸ್ತಾನದ ರಾಯಭಾರಿಯ ಮಗಳಾದ ಸಿಲ್‌ಸಿಲಾ ಅಲಿಖಿಲ್ ಅವರನ್ನು ಅಪಹರಣ ಮಾಡಲಾಗಿದೆ. ಅವರು ಬಾಡಿಗೆ ವಾಹನದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಅಪರಿಚಿತರಿಂದ ಕೆಲ ಗಂಟೆಗಳ ಕಾಲ ಅಪಹರಣಕ್ಕೊಳಗಾಗಿದ್ದಾರೆ. ನಂತರ ಸಿಲ್‌ಸಿಲಾ ಅವರಿಗೆ ತೀವ್ರತರನಾದ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 

ಆದರೆ, ಅಪಹರಣದ ವಿವರಗಳನ್ನು ಹಂಚಿಕೊಂಡಿಲ್ಲ. ಅಪಹರಣಕಾರರಿಂದ ಬಿಡುಗಡೆ ಹೊಂದಿದ ಬಳಿಕ ಸಿಲ್‌ಸಿಲಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಹಾಗೂ ಅಫ್ಘಾನಿಸ್ತಾನದ ರಾಯಭಾರಿ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದೂ ಅಘ್ಘನ್, ಪಾಕಿಸ್ತಾನಕ್ಕೆ  ಒತ್ತಾಯಿಸಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಯಭಾರಿ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದೆ.

SCROLL FOR NEXT