ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಚ್ಚರಿಯ ರೀತಿಯಲ್ಲಿ ಮಾತುಕತೆ ನಡೆಸಿದ ಉತ್ತರ ಹಾಗೂ ದಕ್ಷಿಣ ಕೊರಿಯಾ

ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು ಅಚ್ಚರಿಯ ರೀತಿಯಲ್ಲಿ ಮಾತುಕತೆಯನ್ನು ಪುನಾರಂಭ ಮಾಡಿವೆ.

ಉತ್ತರ ಕೊರಿಯಾ ಸರ್ವಾಧಿಕಾರಿ- ದಕ್ಷಿಣ ಕೊರಿಯಾ ಅಧ್ಯಕ್ಷರು
Srinivas Rao BV
Updated On : 27 Jul 2021, 11:34 am

ಸಿಯೋಲ್: ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು ಅಚ್ಚರಿಯ ರೀತಿಯಲ್ಲಿ ಮಾತುಕತೆಯನ್ನು ಪುನಾರಂಭ ಮಾಡಿವೆ. 

ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಾರಂಭ ಮಾಡಲು ನಿರ್ಧರಿಸಿರುವುದನ್ನು ಉಭಯ ದೇಶಗಳ ನಾಯಕರು ಜು.27 ರಂದು ಘೋಷಿಸಿದ್ದಾರೆ. ಕೊರಿಯಾ ಯುದ್ಧ ಅಂತ್ಯಗೊಂಡ ದಿನದ ವಾರ್ಷಿಕ ನೆನಪಿನ ದಿನದಂದೇ ಈ ಘೋಷಣೆಯಾಗಿರುವುದು ಅಚ್ಚರಿ ಮೂಡಿಸಿದೆ. 

2018 ರಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಉತ್ತರ ಕೊರಿಯಾ-ದಕ್ಷಿಣ ಕೊರಿಯಾದ ಅಧ್ಯಕ್ಷರುಗಳಾದ ಕಿಮ್ ಜಾಂಗ್ ಉನ್ ಹಾಗೂ ಮೂನ್ ಜೇ-ಇನ್ ಐತಿಹಾಸಿಕ ದ್ವಿಪಕ್ಷೀಯ ಮಾತುಕಗೆ ಚಾಲನೆ ನೀಡಿದ್ದರು. ಆದರೆ ಮಹತ್ತರವಾದದ್ದನ್ನು ಸಾಧಿಸಲು ವಿಫಲರಾಗಿ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿತ್ತು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement