ವಿದೇಶ

ಅಮೆರಿಕದಿಂದ ಭಾರತಕ್ಕೆ ಕೋವಿಡ್-19 ಲಸಿಕೆ ಪೂರೈಕೆ: ಪ್ರಧಾನಿ ಮೋದಿ-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾತುಕತೆ, ಭರವಸೆ

Sumana Upadhyaya

ವಾಷಿಂಗ್ಟನ್: ಕೋವಿಡ್-19 ಲಸಿಕೆಯನ್ನು ಭಾರತಕ್ಕೆ ಕಳುಹಿಸಿಕೊಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾತನಾಡಿದ್ದಾರೆ.

ಇಂದು ಬೆಳಗ್ಗೆ ಕಮಲಾ ಹ್ಯಾರಿಸ್ ಅವರು, ಪ್ರಧಾನಿ ಮೋದಿ, ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಗ್ವಾಟೆಮಾಲಾ ಅಧ್ಯಕ್ಷ ಅಲೆಜಾಂಡ್ರೊ ಜಿಯಮ್ಮಟ್ಟಿ ಮತ್ತು ಕೆರಿಬಿಯನ್ ಸಮುದಾಯದ ಅಧ್ಯಕ್ಷ ಪ್ರಧಾನಿ ಕೀತ್ ರೌಲಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.

ನಾಲ್ವರು ನಾಯಕರಿಗೂ ಪ್ರತ್ಯೇಕವಾಗಿ ಕರೆ ಮಾಡಿ ಮಾತನಾಡಿದ ಕಮಲಾ ಹ್ಯಾರಿಸ್, ಅಮೆರಿಕಾದ ಬೈಡನ್-ಹ್ಯಾರಿಸ್ ಆಡಳಿತವು ಮೊದಲ 25 ಮಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಆಯಾ ದೇಶಗಳಿಗೆ ಮತ್ತು ಇತರರಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತದೆ. ಹಂಚಿಕೆಗಾಗಿ ಬೈಡನ್-ಹ್ಯಾರಿಸ್ ಆಡಳಿತದ ಚೌಕಟ್ಟಿನ ಭಾಗವಾಗಿ ಜೂನ್ ಅಂತ್ಯದ ವೇಳೆಗೆ ಜಾಗತಿಕವಾಗಿ ಕನಿಷ್ಠ 80 ಮಿಲಿಯನ್ ಲಸಿಕೆಗಳನ್ನು ವಿತರಿಸಲಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಡೋಸ್ ಲಸಿಕೆಗಳನ್ನು ನೀಡುವುದು, ಸಾರ್ವಜನಿಕರ ಆರೋಗ್ಯದ ಅಗತ್ಯತೆ ದೃಷ್ಟಿಯಿಂದ ಲಸಿಕೆಗಳನ್ನು ಕೇಳಿದ ರಾಷ್ಟ್ರಗಳಿಗೆ ಸಾಧ್ಯವಾದಷ್ಟು ಡೋಸ್ ಗಳನ್ನು ನೀಡುವುದು ತಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಕಮಲಾ ಹ್ಯಾರಿಸ್ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರ ಹಿರಿಯ ಸಲಹೆಗಾರ ಮತ್ತು ಮುಖ್ಯ ವಕ್ತಾರ ಸೈಮನ್ ಸ್ಯಾಂಡರ್ಸ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ನಾಲ್ವರು ನಾಯಕರೂ ಕೂಡ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ್ದು ಕೋವಿಡ್-19 ಮಹಾಮಾರಿಯನ್ನು ಹೊಡೆದೋಡಿಸಲು ಜಂಟಿಯಾಗಿ ಪರಸ್ಪರ ಹಿತಾಸಕ್ತಿಯಿಂದ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಸ್ಯಾಂಡರ್ಸ್ ಹೇಳಿದ್ದಾರೆ.

ಈ ಮೊದಲು, ಅಧ್ಯಕ್ಷ ಜೋ ಬೈಡನ್ ಅಮೆರಿಕ ಶೇಕಡಾ 75 ರಷ್ಟು - 2.5 ಕೋಟಿ ಡೋಸ್‌ಗಳ ಮೊದಲ ಕಂತಿನ ಸುಮಾರು 1.9 ಕೋಟಿ - ಯುಎನ್ ಬೆಂಬಲಿತ ಕೋವಾಕ್ಸ್ ಜಾಗತಿಕ ಲಸಿಕೆಯನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದ್ದರು. ಆಗ್ನೇಯ ಏಷ್ಯಾ ಮತ್ತು ಆಫ್ರಿಕಾವು ಜೂನ್ ಅಂತ್ಯದ ವೇಳೆಗೆ ಜಾಗತಿಕವಾಗಿ 80 ಮಿಲಿಯನ್ (8 ಕೋಟಿ) ಲಸಿಕೆಗಳನ್ನು ಹಂಚಿಕೊಳ್ಳುವ ಆಡಳಿತಾತ್ಮಕ ನಿರ್ಧಾರವನ್ನು ಹೊಂದಿದ್ದರು.

ಅಮೆರಿಕಾದ ಶ್ವೇತಭವನದ ಮಾಹಿತಿ ಪ್ರಕಾರ, ಸುಮಾರು 19 ಮಿಲಿಯನ್ ಲಸಿಕೆಗಳನ್ನು ಕೊವ್ಯಾಕ್ಸ್ ಮೂಲಕ ಹಂಚಿಕೆ ಮಾಡಲಾಗುತ್ತದೆ.

SCROLL FOR NEXT