ವಿದೇಶ

ಕೋವಿಡ್-19: ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್ ನಿಂದ ಸಾವು

Srinivasamurthy VN

ವಾಷಿಂಗ್ಟನ್: ಕೋವಿಡ್‍ ಸಾಂಕ್ರಾಮಿಕದಿಂದ ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ರಾಯಿಟರ್ಸ್‌ ವರದಿ ಮಾಡಿದೆ.

ಅಮೆರಿಕ ಮತ್ತು ಬ್ರಿಟನ್‌ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ, ಡೆಲ್ಟಾ ರೂಪಾಂತರವು ವಿಶ್ವದಾದ್ಯಂತ ಪ್ರಬಲವಾಗಿರುವುದರಿಂದ ಹಲವಾರು ರಾಷ್ಟ್ರಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ ಎಂದು ರಾಯಿಟರ್ಸ್‌ ವಿಶ್ಲೇಷಿಸಿದೆ.

ಕೋವಿಡ್‌ ಸಂಬಂಧಿತ ಸಾವಿನ ಸಂಖ್ಯೆ 20 ಲಕ್ಷ ತಲುಪಲು ಒಂದು ವರ್ಷ ತೆಗೆದುಕೊಂಡಿತು. ಆದರೆ ಮುಂದಿನ 2೦ ಲಕ್ಷ ಸಾವುಗಳು ಕೇವಲ 166 ದಿನಗಳಲ್ಲಿ ದಾಖಲಾಗಿವೆ. ವಿಶ್ವದ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 50 ಸಾವುಗಳು ಅಮೆರಿಕ, ಬ್ರೆಜಿಲ್‌, ಭಾರತ, ರಷ್ಯಾ ಮತ್ತು ಮೆಕ್ಸಿಕೊ ರಾಷ್ಟ್ರಗಳಲ್ಲಿಯೇ ಸಂಭವಿಸಿವೆ ಎಂದು ರಾಯಿಟರ್ಸ್‌ ತನ್ನ ವರದಿಯಲ್ಲಿ ತಿಳಿಸಿದೆ.

ರಾಯಿಟರ್ಸ್ ವಿಶ್ಲೇಷಣೆಯ ಪ್ರಕಾರ, ಪ್ರತಿದಿನ ವಿಶ್ವದಾದ್ಯಂತ ವರದಿಯಾಗುವ ಪ್ರತಿ ಮೂರು ಸಾವುಗಳಲ್ಲಿ ಒಂದು ಸಾವು ಭಾರತದಲ್ಲಿ ಸಂಭವಿಸುತ್ತಿದೆ. ಬಡ ರಾಷ್ಟ್ರಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ. ಸಾಂಕ್ರಾಮಿಕವನ್ನು ನಿಯಂತ್ರಿಸಲು ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಹೆಚ್ಚಿನ ದೇಣಿಗೆ ನೀಡಬೇಕೆಂದು ಒತ್ತಾಯಿಸಲಾಗಿದೆ.

SCROLL FOR NEXT