ವಿದೇಶ

ನ್ಯೂಯಾರ್ಕ್: ಟೈಮ್ಸ್ ಸ್ವ್ಕೇರ್ ನಲ್ಲಿ 3 ಸಾವಿರ ಮಂದಿಯಿಂದ ಯೋಗಾಭ್ಯಾಸ!

Srinivas Rao BV

ನವದೆಹಲಿ: ಅಂತಾರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಟೈಮ್ಸ್ ಸ್ಕ್ವೇರ್ ನಲ್ಲಿ 3,000 ಮಂದಿ ಯೋಗಾಭ್ಯಾಸ ಮಾಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. 

ಭಾರತೀಯ ಪ್ರಧಾನ ದೂತಾವಾಸ, ನ್ಯೂಯಾರ್ಕ್ ಹಾಗೂ ಟೈಮ್ಸ್ ಸ್ಕ್ವೇರ್ ಸಹಯೋಗದಲ್ಲಿ ಯೋಗದಿನಾಚರಣೆಯನ್ನು ನಡೆಸಲಾಗಿದೆ. ಪ್ರತಿ ವರ್ಷ ಟೈಮ್ಸ್ ಸ್ಕ್ವೇರ್ ನಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ನ್ಯೂಯಾರ್ಕ್ ನಲ್ಲಿ ಕೋವಿಡ್-19 ನಿರ್ಬಂಧಗಳಿಗೆ ವಿನಾಯ್ತಿ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ದಿನವಿಡೀ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಗತ್ತಿನ ವಿವಿಧ ಭಾಗಗಳಲ್ಲಿ ಯೋಗವನ್ನು ಆಚರಣೆ ಮಾಡಲಾಗುತ್ತದೆ. ಯೋಗ ವೈಶ್ವಿಕ ಚಿಂತನೆಯಾಗಿದೆ, ವೈಶ್ವಿಕ ಕ್ರಿಯೆಯಾಗಿದೆ. ವೈಶ್ವಿಕ ಚಿಂತನೆಯನ್ನು ಆಚರಣೆ ಮಾಡುವುದಕ್ಕೆ ಟೈಮ್ಸ್ ಸ್ಕ್ವೇರ್ ಗಿಂತಲೂ ಉತ್ತಮವಾದ ಜಾಗ ಯಾವುದಿದೆ? ಎಂದು ಭಾರತೀಯ ಪ್ರಧಾನ ದೂತಾವಾಸದ ಅಧಿಕಾರಿ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಅನಿವಾಸಿ ಭಾರತೀಯ ಸಮುದಾಯದವರೊಂದಿಗೆ ಜೈಸ್ವಾಲ್ ಸಹ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

SCROLL FOR NEXT