ವಿದೇಶ

ಭಾರತದಲ್ಲಿ ಪತ್ತೆಯಾಗಿರುವ ಬಿ-1617 ಕೊರೋನಾ ರೂಪಾಂತರಿ ಹೆಚ್ಚು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

Vishwanath S

ವಿಶ್ವಸಂಸ್ಥೆ: ಭಾರತದಲ್ಲಿ ಕಂಡು ಬಂದಿರುವ ಕೋವಿಡ್ ರೂಪಾಂತರಿ (ಬಿ -1617) ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. 

ಈ ಸಂಬಂಧ ವಿವರಗಳನ್ನು ಸಂಸ್ಥೆಯ ಕೋವಿಡ್ ವಿಭಾಗದ ತಾಂತ್ರಿಕ ತಜ್ಞೆ ಡಾ. ಮರಿಯಾ ವ್ಯಾನ್ ಕರ್ಖೋವ್ ಅವರು ಸೋಮವಾರ ತಿಳಿಸಿದ್ದಾರೆ.

ಭಾರತದಲ್ಲಿ ವೈರಸ್ ಪ್ರಸರಣದ ತೀವ್ರತೆಯ ಮಾಹಿತಿ ನಮಗಿದೆ. ಈ ಸಂಬಂಧ ಸ್ಥಳೀಯವಾಗಿ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ನಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನೆ ಮತ್ತು ಪ್ರಯೋಗಾಲಯಗಳಿಂದವಿ ವರಗಳನ್ನು ಸಂಗ್ರಹಿಸುತ್ತೇವೆ. ಅವರ ಪ್ರಕಾರ, ಈ ರೂಪಾಂತರಿ ಪ್ರಸರಣ ಗಂಭೀರವಾಗಿದ್ದು, ಅದು ಜಗತ್ತಿಗೆ ಆತಂಕಕಾರಿಯಾಗಿದೆ ಎಂದು ಗುರುತಿಸಿದ್ದೇವೆ.   

ಪ್ರಸ್ತುತ ನಮ್ಮಲ್ಲಿ ಪ್ರಾಥಮಿಕ ಮಾಹಿತಿ ಮಾತ್ರ ಇದೆ. ರೂಪಾಂತರಿಯ ಜೀನೋಮ್ ಬಗ್ಗೆ ಮತ್ತಷ್ಟು ಆಳವಾಗಿ ತಿಳಿದುಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ನಾವು ಹೆಚ್ಚಿನ ಸಂಖ್ಯೆಯ ಕೊರೋನಾ ವೈರಸ್‌ಗಳು ಹಾಗೂ ರೂಪಾಂತರಿಗಳನ್ನು ನೋಡಬೇಕಾಗಿದೆ. ಅವುಗಳ ಪ್ರಸರಣ ತಡೆಗಟ್ಟುವುದು, ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಹಾಗೂ ಸಾವುಗಳನ್ನು ತಡೆಯುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

SCROLL FOR NEXT