ವಿದೇಶ

ಭಾರತದ ಕೋವಿಡ್-19 ಪರಿಸ್ಥಿತಿ ತೀವ್ರ ಕಳವಳಕಾರಿ; ಸಾಂಕ್ರಾಮಿಕದ ಎರಡನೇ ವರ್ಷ ಅತ್ಯಂತ ಮಾರಕ: ಡಬ್ಲ್ಯುಹೆಚ್ಒ 

Srinivas Rao BV

ವಿಶ್ವಸಂಸ್ಥೆ: ಭಾರತದ ಕೋವಿಡ್-19 ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದ್ದು ಹಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. 

"ಕೋವಿಡ್-19 ಸಾಂಕ್ರಾಮಿಕದ ಎರಡನೇ ವರ್ಷ ಮೊದಲ ವರ್ಷಕ್ಕಿಂತಲೂ ಅತ್ಯಂತ ಮಾರಕವಾಗಿದೆ" ಎಂದೂ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. 

ಭಾರತದಲ್ಲಿ ಏರಿಕೆಯಾಗುತ್ತಿರುವ ಕೋವಿಡ್-19 ಪ್ರಸರಣ ನಿಯಂತ್ರಣಕ್ಕೆ ಡಬ್ಲ್ಯುಹೆಚ್ಒ ಸ್ಪಂದಿಸುತ್ತಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಗಳು, ಮೊಬೈಲ್ ಫೀಲ್ಡ್ ಆಸ್ಪತ್ರೆಗಳಿಗಾಗಿ ಟೆಂಟ್ ಗಳು, ಮಾಸ್ಕ್ ಗಳು ಹಾಗೂ ಇತರ ವೈದ್ಯಕೀಯ ಉಪಕರಣಗಳನ್ನು ಡಬ್ಲ್ಯುಹೆಚ್ಒ ಕಳಿಸಿಕೊಟ್ಟಿದೆ ಹಾಗೂ ಭಾರತಕ್ಕೆ ನೆರವು ನೀಡುತ್ತಿರುವ ದೇಶಗಳಿಗೆ ಡಬ್ಲ್ಯುಹೆಚ್ಒ ಧನ್ಯವಾದ ತಿಳಿಸುತ್ತದೆ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. 

ಡಿ.19 ರಂದು 10 ಮಿಲಿಯನ್ ನಷ್ಟಿದ್ದ ಕೋವಿಡ್-19 ಪ್ರಕರಣಗಳು ಕೇವಲ 6 ತಿಂಗಳಲ್ಲಿ 20 ಮಿಲಿಯನ್ ಗೆ ಏರಿಕೆ ಕಂಡಿದೆ. ಭಾರತವಷ್ಟೇ ಅಲ್ಲದೇ ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ಕಾಂಬೋಡಿಯಾ, ಥಾಯ್ಲ್ಯಾಂಡ್, ಈಜಿಪ್ಟ್ ಗಳಲ್ಲೂ ಕೊರೋನಾ ಸೋಂಕಿನ ಪ್ರಸರಣ ಆತಂಕಕಾರಿಯಾಗಿದೆ ಎಂದು ಡಬ್ಲ್ಯುಹೆಚ್ಒ ತಿಳಿಸಿದೆ. 

SCROLL FOR NEXT