ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅರುಣಾಚಲ ಪ್ರದೇಶದ ಗಡಿ ಸಮೀಪ ಬ್ರಹ್ಮಪುತ್ರ ಕಣಿವೆಯಲ್ಲಿ ಚೀನಾದಿಂದ ಹೆದ್ದಾರಿ ನಿರ್ಮಾಣ

ಬ್ರಹ್ಮಪುತ್ರ ಕಣಿವೆಯ ಮೂಲಕ ಚೀನಾವು ಪ್ರಮುಖ ಹೆದ್ದಾರಿಯ ನಿರ್ಮಾಣವನ್ನು ಪೂರ್ಣಗೊಳಿಸಿದೆ ಇದು ವಿಶ್ವದ ಅತ್ಯಂತ ಆಳವಾದ ಕಣಿವೆ ಆಗಿದ್ದು ಅರುಣಾಚಲ ಪ್ರದೇಶದ ಗಡಿಗೆ ಹತ್ತಿರದಲ್ಲಿದೆ ಎಂದು ಹೇಳಲಾಗಿದೆ.

ಬ್ರಹ್ಮಪುತ್ರ ನದಿ
Raghavendra Adiga
Updated On : 21 May 2021, 12:31 pm

ಬೀಜಿಂಗ್: ಬ್ರಹ್ಮಪುತ್ರ ಕಣಿವೆಯ ಮೂಲಕ ಚೀನಾವು ಪ್ರಮುಖ ಹೆದ್ದಾರಿಯ ನಿರ್ಮಾಣವನ್ನು ಪೂರ್ಣಗೊಳಿಸಿದೆ ಇದು ವಿಶ್ವದ ಅತ್ಯಂತ ಆಳವಾದ ಕಣಿವೆ ಆಗಿದ್ದು ಅರುಣಾಚಲ ಪ್ರದೇಶದ ಗಡಿಗೆ ಹತ್ತಿರದಲ್ಲಿದೆ ಎಂದು ಹೇಳಲಾಗಿದೆ.

ಗರಿಷ್ಠ 6,009 ಮೀಟರ್ ಆಳವನ್ನು ಹೊಂದಿರುವ ವಿಶ್ವದ ಆಳವಾದ ಕಣಿವೆ ಎಂದು ಕರೆಯಲ್ಪಡುವ ಯಾರ್ಲುಂಗ್ ಟ್ಸಾಂಗ್ಪೋ  ಗ್ರ್ಯಾಂಡ್ ಕಣಿವೆ ಮೂಲಕ 310 ಮಿಲಿಯನ್ ಡಾಲರ್ ವೆಚ್ಚದ ಹೆದ್ದಾರಿಯ ನಿರ್ಮಾಣವು ಕಳೆದ ಶನಿವಾರ ಪೂರ್ಣಗೊಂಡಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಬಲ ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂದು ಕರೆಯಲಾಗುತ್ತದೆ. 

Advertisement

Advertisement

ನಿಯಿಂಗ್ಚಿ ಮತ್ತು ಮೆಡೋಗ್ ಕೌಂಟಿಯ ಪ್ಯಾಡ್ ಟೌನ್‌ಶಿಪ್‌ಗೆ ಸಂಪರ್ಕ ಕಲ್ಪಿಸುವ 67.22 ಕಿ.ಮೀ ರಸ್ತೆಯ ಪ್ರಮುಖ ನಿರ್ಮಾಣ ಪೂರ್ಣಗೊಂಡಿದ್ದು, ಎರಡೂ ಸ್ಥಳಗಳ ಪ್ರಯಾಣದ ಸಮಯವನ್ನು ಎಂಟು ಗಂಟೆಗಳಷ್ಟು ಕಡಿತಗೊಳಿಸಲಿದೆ. ಶನಿವಾರ ಬೆಳಿಗ್ಗೆ 2,114 ಮೀಟರ್ ಸುರಂಗವನ್ನು ಅಗೆಯಲಾಗಿದೆ. ಮೆಡುಗ್ ಟಿಬೆಟ್‌ನ ಕೊನೆಯ ಕೌಂಟಿಯಾಗಿದ್ದು, ಇದು ಅರುಣಾಚಲ ಪ್ರದೇಶದ ಗಡಿಗೆ ಹತ್ತಿರದಲ್ಲಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ, ಇದನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement