ವಿದೇಶ

ಫೇಸ್ ರೆಕಗ್ನಿಷನ್ ವ್ಯವಸ್ಥೆ ಸ್ಥಗಿತಗೊಳಿಸಿದ ಫೇಸ್ ಬುಕ್; ಲಕ್ಷಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್ ಗಳು ಡಿಲೀಟ್!

Srinivasamurthy VN

ವಾಷಿಂಗ್ಟನ್: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಜನಪ್ರಿಯ ಸೇವೆ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದು, ಆ ಮೂಲಕ ಲಕ್ಷಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್ ಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದೆ.

ಫೇಸ್ ಬುಕ್ ನ ಜನಪ್ರಿಯ ಸೇವೆಗಳಲ್ಲಿ ಒಂದಾಗಿದ್ದ ಸ್ವಯಂ ಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲ್ಲಿದ್ದು, ಈ ಸೇವೆಯ ಮೂಲಕ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಾಗಿತ್ತು. 

ಆದರೆ ಇದೀಗ ಈ ಸ್ವಯಂ ಮುಖ ಗುರುತಿಸುವಿಕೆ ವ್ಯವಸ್ಥೆಯಿಂದಾಗಿ ಈ ತಂತ್ರಜ್ಞಾನದ ದುರ್ಬಳಕೆ ಕುರಿತು ವ್ಯಾಪಕ ಕಳವಳಗಳು ವ್ಯಕ್ತವಾಗಿತ್ತು. ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಸಾಮಾಜಿಕ ಕಳವಳಗಳ ಹಿನ್ನಲೆಯಲ್ಲಿ ಫೇಸ್ ಬುಕ್ ಈ ಸೇವೆಯನ್ನು ರದ್ದುಗೊಳಿಸಲು ಮುಂದಾಗಿದೆ.

ಈ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಮಾಹಿತಿ ನೀಡಿರುವ ಫೇಸ್‌ಬುಕ್‌ನ ಕೃತಕ ಬುದ್ಧಿಮತ್ತೆಯ ಉಪಾಧ್ಯಕ್ಷ ಜೆರೋಮ್ ಪೆಸೆಂಟಿ ಅವರು, 'ನಿಯಂತ್ರಕರು ಇನ್ನೂ ಅದರ ಬಳಕೆಯನ್ನು ನಿಯಂತ್ರಿಸುವ ಸ್ಪಷ್ಟವಾದ ನಿಯಮಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದ್ದಾರೆ. ನಡೆಯುತ್ತಿರುವ ಅನಿಶ್ಚಿತತೆಯ ಮಧ್ಯೆ, ಮುಖ ಗುರುತಿಸುವಿಕೆಯ ಬಳಕೆಯನ್ನು ಕಿರಿದಾದ ಬಳಕೆಯ ಪ್ರಕರಣಗಳಿಗೆ ಸೀಮಿತಗೊಳಿಸುವುದು ಸೂಕ್ತವಾಗಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

Meta Platforms Inc ನೀಡಿರುವ ಮಾಹಿತಿಯನ್ವಯ ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಮುಖ ಗುರುತಿಸುವಿಕೆ ಸೆಟ್ಟಿಂಗ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ. ಹಾಲಿ ಬದಲಾವಣೆಯು ಈಗ 1 ಬಿಲಿಯನ್‌ಗಿಂತಲೂ ಹೆಚ್ಚು ಜನರ "ಮುಖ ಗುರುತಿಸುವಿಕೆ ಟೆಂಪ್ಲೇಟ್‌ಗಳನ್ನು ಅಳಿಸುತ್ತದೆ ಮತ್ತು ಈ ಪ್ರಕ್ರಿಯೆ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಫೇಸ್ ಬುಕ್ ವಕ್ತಾರರು ತಿಳಿಸಿದ್ದಾರೆ.

SCROLL FOR NEXT