ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 
ವಿದೇಶ

ಅಧ್ಯಕ್ಷ ಬೈಡನ್ ಗೆ ಅನಾರೋಗ್ಯ: ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿ ಅಲ್ಪ ಹೊತ್ತಿಗೆ ಅಧ್ಯಕ್ಷ ಹುದ್ದೆ ಅಲಂಕರಿಸುತ್ತಿರುವ ಮಹಿಳೆ ಕಮಲಾ ಹ್ಯಾರಿಸ್!

ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಶ್ವೇತಭವನ ವೈದ್ಯರಿಂದ ಸಮಗ್ರವಾಗಿ ವಾಡಿಕೆಯ ತಪಾಸಣೆಗೆ ಒಳಗಾದರು. ಈ ಸಮಯದಲ್ಲಿ ಅವರ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ವರ್ಗಾಯಿಸಲಾಯಿತು. 

ವಾಷಿಂಗ್ಟನ್: ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಶ್ವೇತಭವನ ವೈದ್ಯರಿಂದ ಸಮಗ್ರವಾಗಿ ವಾಡಿಕೆಯ ತಪಾಸಣೆಗೆ ಒಳಗಾದರು. ಈ ಸಮಯದಲ್ಲಿ ಅವರ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ವರ್ಗಾಯಿಸಲಾಯಿತು. 

79 ವರ್ಷದ ಅಧ್ಯಕ್ಷ ಜೊ ಬೈಡನ್ ಅವರು ಆರೋಗ್ಯಯುತರಾಗಿದ್ದು, ಹುರುಪು-ಉತ್ಸಾಹದಿಂದ ಇದ್ದಾರೆ. ಅಧ್ಯಕ್ಷರ ಜವಾಬ್ದಾರಿ, ಕರ್ತವ್ಯಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಮರ್ಥರಾಗಿದ್ದಾರೆ, ಅವರ ಮುಖ್ಯ ಕಾರ್ಯನಿರ್ವಾಹಕ, ರಾಷ್ಟ್ರದ ಮುಖ್ಯಸ್ಥರು ಮತ್ತು ಕಮಾಂಡರ್ ಇನ್ ಚೀಫ್ ಕೆಲಸವನ್ನು ಸದ್ಯಕ್ಕೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವರ್ಗಾಯಿಸಲಾಗಿದೆ ಎಂದು ಶ್ವೇತಭವನದ ವೈದ್ಯ ಕೆವಿನ್ ಒ'ಕೊನ್ನೊರ್ ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಜೊ ಬೈಡನ್ ಅವರು ನಡೆಯುವಾಗ ಕಾಲಿಗೆ ಪೆಟ್ಟು ಬಿದ್ದು ಸಮಸ್ಯೆಯಾಗಿತ್ತು, ಗಂಟಲಿನ ಸಮಸ್ಯೆ ಹೊಂದಿದ್ದು, ಸಾರ್ವಜನಿಕ ಸಭೆ-ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಕೆಮ್ಮು ಬರುತ್ತದೆ ಎಂದು ವೈದ್ಯರು ವರದಿಯಲ್ಲಿ ಬರೆದಿದ್ದಾರೆ. ಆದರೂ ಇದು ಗಂಭೀರವಾದ ಆರೋಗ್ಯ ಸಮಸ್ಯೆಯೇನಲ್ಲ, ದೀರ್ಘಾವಧಿಯ ವಿಶ್ರಾಂತಿಯ ಅಗತ್ಯವೂ ಇಲ್ಲ ಎಂದು ವೈದ್ಯ ಒ'ಕೊನ್ನೊರ್ ತಿಳಿಸಿದ್ದಾರೆ.

ವೈದ್ಯರು ಜೊ ಬೈಡನ್ ಅವರ ದೇಹದ ಸಂಪೂರ್ಣ ತಪಾಸಣೆ ಮಾಡಿದ್ದು ಯಾವುದೇ ಗಂಭೀರ ಸಮಸ್ಯೆಯಿಲ್ಲ, ಹೃದಯದ ಸಮಸ್ಯೆ, ಹಲ್ಲಿನ ಸಮಸ್ಯೆ. ಚರ್ಮದ ಕ್ಯಾನ್ಸರ್ ನ ಸಮಸ್ಯೆ, ಕಣ್ಣಿನ ಅನಾರೋಗ್ಯ ಹೀಗೆ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ. 

ವಾಷಿಂಗ್ಟನ್ ನಲ್ಲಿರುವ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಅಧ್ಯಕ್ಷರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರಿಂದ ಅಲ್ಪ ಸಮಯಕ್ಕೆ ಅಂದರೆ 85 ಗಂಟೆಗಳ ಕಾಲ ತಮ್ಮ ಹುದ್ದೆಯನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವರ್ಗಾಯಿಸುವ ಕಾರ್ಯ ನಡೆದಿದೆ. ಅಮೆರಿಕದ 250 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಯಾವುದೇ ಮಹಿಳೆ ಉಪಾಧ್ಯಕ್ಷೆಯಾಗಿರಲಿಲ್ಲ, ಆ ದಾಖಲೆಯ ಜೊತೆಗೆ ಇದೀಗ ಕಮಲಾ ಹ್ಯಾರಿಸ್ ಅವರು ಅಲ್ಪಾವಧಿಗೆ ಅಮೆರಿಕ ಅಧ್ಯಕ್ಷೆಯಾಗುವ ಮೂಲಕ ಕೂಡ ಇತಿಹಾಸ ನಿರ್ಮಿಸಿದ್ದಾರೆ.

ತಮ್ಮ ಅನಾರೋಗ್ಯ ಸಮಸ್ಯೆಗೆ ಅಧ್ಯಕ್ಷರು ಅನಸ್ತೇಷಿಯಾಕ್ಕೆ ಒಳಗಾಗಬೇಕಿರುವುದರಿಂದ ಸ್ವಲ್ಪ ಸಮಯಕ್ಕೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಜೊ ಬೈಡನ್ ಅಧಿಕಾರ ವರ್ಗಾಯಿಸಲಿದ್ದಾರೆ. ಈ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರು ಶ್ವೇತಭವನದ ಪೂರ್ವ ಭಾಗದಲ್ಲಿರುವ ತಮ್ಮ ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸಲಿದ್ದಾರೆ. 

ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು 2002ರಿಂದ 2007 ರ ಮಧ್ಯೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಒಮ್ಮೆ ಅನಾರೋಗ್ಯಕ್ಕೀಡಾಗಿದ್ದ ವೇಳೆ  ತಮ್ಮ ಹುದ್ದೆಯನ್ನು ಅಲ್ಪಾವಧಿಗೆ ವರ್ಗಾಯಿಸಿದ್ದರು.

ಇಂದು 80 ವರ್ಷಕ್ಕೆ ಕಾಲಿಡುತ್ತಿರುವ ಜೊ ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಹುದ್ದೆ ವಹಿಸಿಕೊಂಡ ಅತಿ ಹಿರಿಯ ವ್ಯಕ್ತಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT