ವಿದೇಶ

ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಒಪ್ಪಿಗೆಗೆ ಕಾದಿರುವ ಕೊರೋನಾ ಗುಳಿಗೆ

Harshavardhan M

ಆಮ್ ಸ್ಟರ್ ಡ್ಯಾಮ್: ಇದೇ ಮೊದಲ ಬಾರಿಗೆ ಔಷಧ ಸಂಸ್ಥೆಯೊಂದು ಕೊರೊನಾ ಚಿಕಿತ್ಸೆಯಲ್ಲಿ ಸಹಾಯವಾಗುವ ತನ್ನ ಗುಳಿಗೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀದುವಂತೆ ಕೋರಿರುವ ವಿಷಯವನ್ನು ಐರೋಪ್ಯ ಔಷಧ ಸಂಸ್ಥೆ ಬಹಿರಂಗಪಡಿಸಿದೆ. 

ಮರ್ಕ್ (Merck) ಎನ್ನುವ ಔಷಧ ಸಂಸ್ಥೆ ಮೊಲ್ನುಪಿರಾವಿರ್ (Molnupiravir) ಎನ್ನುವ ಕೊರೊನಾ ಗುಳಿಗೆಯನ್ನು ಅಭಿವೃದ್ಧಿಪಡಿಸಿದೆ. ಇದೀಗ ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಅನುಮತಿಗಾಗಿ ಕಾದಿದೆ. 

ಕೊರೊನಾ ಪತ್ತೆಯಾದ 5 ದಿನಗಳ ಒಳಗೆ ಈ ಗುಳಿಗೆಯನ್ನು ರೋಗಿಗೆ ನೀಡಬೇಕು. ನಂತರದ 5 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಈ ಗುಳಿಗೆಯನ್ನು ಸೇವಿಸಬೇಕು. 

ಈ ಮಾತ್ರೆಯಿಂದ ಕೊರೊನಾ ಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೆ, ರೋಗಿಗಳು ಬೇಗನೆ ಗುಣಮುಖರಾಗುತ್ತಾರೆ ಎಂದು ಔಷಧ ಸಂಸ್ಥೆ ತಿಳಿಸಿದೆ. ಒಂದು ವೇಳೆ ಔಷಧ ಸಂಸ್ಥೆಯ ಈ ಭರವಸೆ ಸಾಬೀತಾದರೆ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. 

ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು.

SCROLL FOR NEXT