ಮಾಡರ್ನ ಲಸಿಕೆಯ ಸಾಂದರ್ಭಿಕ ಚಿತ್ರ 
ವಿದೇಶ

ಅಗತ್ಯ ಬಿದ್ದರೆ ಒಮಿಕ್ರಾನ್ ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧ: ಮಾಡರ್ನ ಕಂಪನಿ

ಕೊರೋನಾ ಹೊಸ ರೂಪಾಂತರವಾದ ಒಮಿಕ್ರಾನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ. 

ಮ್ಯಾಸಚೂಸೆಟ್ಸ್/ಅಮೆರಿಕ: ಕೊರೋನಾ ಹೊಸ ರೂಪಾಂತರವಾದ ಒಮಿಕ್ರಾನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ. 

ಒಮಿಕ್ರಾನ್  ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧವನ್ನು ಜಾರಿಗೆ ತಂದಿವೆ. ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.  

ಒಮಿಕ್ರಾನ್ ರೂಪಾಂತರದ ವಿಶೇಷ ಲಸಿಕೆ (ಒಮಿಕ್ರಾನ್ ಸ್ಪೆಸಿಫಿಕ್) 2 ರಿಂದ 3 ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಮಾಡರ್ನ ವ್ಯಾಕ್ಸಿನ್ ಕಂಪನಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕರೋನಾದ ಹೊಸ ರೂಪಾಂತರದಿಂದಾಗಿ ಜಗತ್ತು ಮತ್ತೆ ಸಮಸ್ಯೆಗೆ ಸಿಲುಕಿದೆ. ಈ ಹೊಸ ರೂಪಾಂತರವನ್ನು ನಿಯಂತ್ರಿಸುವಲ್ಲಿ ಅಸ್ತಿತ್ವದಲ್ಲಿರುವ ಲಸಿಕೆ ಪರಿಣಾಮಕಾರಿವಾಗಲಿದೆ ಅನ್ನೋದು ಇನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ.

ಮಾಡರ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಪಾಲ್ ಬರ್ಟನ್ ನೀಡಿರುವ ಹೇಳಿಕೆ ಪ್ರಕಾರ  ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಗೆ ಪ್ರತ್ಯೇಕ ಲಸಿಕೆ ಅಗತ್ಯಬಿದ್ದರೆ, ಅದು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ರೂಪಾಂತರ ಮತ್ತು ಲಸಿಕೆ ದಕ್ಷತೆಯ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಲಸಿಕೆ ಹಾಕಿದ್ದರೂ, ಈ ರೂಪಾಂತರಿ ಸೋಂಕಿತರಿಂದ ಮಾದರಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ  ಅಂತಾ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್