ವಿದೇಶ

2022-24ರ ಅವಧಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ!

Vishwanath S

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ) 2022-24ರ ಅವಧಿಗೆ ಭಾರತವು ಆರನೇ ಬಾರಿಗೆ ಬಹುಮತದೊಂದಿಗೆ ಆಯ್ಕೆಯಾಗಿದೆ. 

ಚುನಾವಣೆಯ ನಂತರ, ಗೌರವ, ಮಾತುಕತೆ ಮತ್ತು ಸಹಕಾರದ ಮೂಲಕ ಮಾನವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಭಾರತವು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿತು. 

ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್ ಟ್ವೀಟ್ ಮಾಡುವ ಮೂಲಕ ಭಾರತದ ಈ ಸಾಧನೆಯ ಬಗ್ಗೆ ಮಾಹಿತಿ ನೀಡಿದೆ. ಯುಎನ್‌ಎಚ್‌ಆರ್‌ಸಿ 2022-24ರ ಅವಧಿಗೆ ಭಾರತವು ಮತ್ತೊಮ್ಮೆ ಬಹುಮತದೊಂದಿಗೆ ಆಯ್ಕೆಯಾಗಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆಯ ಸದಸ್ಯರಿಗೆ ತಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದಕ್ಕಾಗಿ ಭಾರತವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅರ್ಜೆಂಟೀನಾ, ಬೆನಿನ್, ಕ್ಯಾಮರೂನ್, ಎರಿಟ್ರಿಯಾ, ಫಿನ್ಲ್ಯಾಂಡ್, ಜಾಂಬಿಯಾ, ಹೊಂಡುರಾಸ್, ಭಾರತ, ಕಜಕಿಸ್ತಾನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರಾಗ್ವೆ, ಕತಾರ್, ಸೊಮಾಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ರಹಸ್ಯವಾಗಿ ಆಯ್ಕೆ ಮಾಡಿತು.

ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ 2018ರಲ್ಲಿ ಕೌನ್ಸಿಲ್ ಅನ್ನು ತೊರೆದ ಯುನೈಟೆಡ್ ಸ್ಟೇಟ್ಸ್, ಮೂರುವರೆ ವರ್ಷಗಳ ನಂತರ ಜಾಗತಿಕ ಹಕ್ಕುಗಳ ಸಂಸ್ಥೆಗೆ ಮರು ಆಯ್ಕೆಯಾಗಿದೆ. ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮುನ್ನ ಅಮೆರಿಕಾ ಕೂಡ ವಾಕ್ ಔಟ್ ಮಾಡಿತ್ತು. ವಿಶ್ವಸಂಸ್ಥೆಯು ಬೂಟಾಟಿಕೆ ಎಂದು ಅಮೆರಿಕ ಆರೋಪಿಸಿತ್ತು. ಗುರುವಾರ ನಡೆದ ಮತದಾನದಲ್ಲಿ ಅಮೆರಿಕ 168 ಮತಗಳನ್ನು ಪಡೆಯಿತು.

SCROLL FOR NEXT