ವಿದೇಶ

ಕಾಬೂಲ್ ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ 

Srinivas Rao BV

ಕಾಬೂಲ್: ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. 

ತಾಲೀಬಾನ್ ನ ಹೊಸ ಸರ್ಕಾರದ ಅಡಿಯಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರು ಅಧ್ಯಕ್ಷೀಯ ಪ್ಯಾಲೆಸ್ ಗೆ ತೆರಳಲು ಯತ್ನಿಸಿದಾಗ ತಾಲೀಬಾನ್ ಉಗ್ರರು ಅವರನ್ನು ಒತ್ತಾಯಪೂರ್ವಕವಾಗಿ ಅವರನ್ನು ತಡೆದು ನಿಲ್ಲಿಸಿದ್ದಾರೆ. 

ತಾಲೀಬಾನ್ ವಿಶೇಷ ಉಗ್ರ ಸಂಘಟನೆಗಳು ಪ್ರತಿಭಟನಾ ನಿರತರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದು, ಅರಮನೆ ಪ್ರವೇಶಿಸುವುದಕ್ಕೆ ಯತ್ನಿಸಿದ್ದ ಮಹಿಳೆಯರನ್ನು ತಡೆದಿದ್ದಾರೆ. ಪ್ರತಿಭಟನಾ ನಿರತರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ತಾಲೀಬಾನ್ ಸ್ಪಷ್ಟನೆ ನೀಡಿದೆ. 

ಹಕ್ಕುಗಳ ಹೋರಾಟ ಕಾರ್ಯಕರ್ತರು ಈ ಬಗ್ಗೆ ಮಾತನಾಡಿದ್ದು "ನಮ್ಮ ಹಕ್ಕುಹಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮಹಿಳೆಯರ ತಂಡ ಜೊತೆಗೂಡಿ ಪ್ರತಿಭಟನೆ ನಡೆಸಲು ಅಧ್ಯಕ್ಷರ ಪ್ಯಾಲೆಸ್ ಗೆ ತೆರಳುತ್ತಿದ್ದಾಗ ತಾಲೀಬಾನ್ ನಮ್ಮ ಮೇಲೆ ದಾಳಿ ನಡೆಸಿದೆ, ಅಶ್ರುವಾಯು ಪ್ರಯೋಗಿಸಿದೆ, ಮಹಿಳೆಯರನ್ನು ಥಳಿಸಿದೆ" ಎಂದು ಆರೋಪಿಸಿದೆ. 

ಮಾಧ್ಯಮ ಕಾರ್ಯಕರ್ತರಾದ ಅಬ್ದುಲ್ಲಾ ಇಮಾದ್ ಈ ಬಗ್ಗೆ ಮಾತನಾಡಿದ್ದು, "ಪ್ರತಿಭಟನಾ ನಿರತರು ಅಧ್ಯಕ್ಷರ ಅರಮನೆ ಕಡೆಗೆ ತೆರಳುತ್ತಿದ್ದರು, ಆದರೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ. ತಾಲೀಬಾನಿಗಳು ಮಹಿಳೆಯರನ್ನು ತಡೆಯಲು ಯತ್ನಿಸಿದರು, ಆದರೆ ಅದಕ್ಕೆ ಜಗ್ಗದ ಕಾರಣ ಅಶ್ರುವಾಯು ಪ್ರಯೋಗಿಸಲಾಗಿದೆ" ಎಂದು ಹೇಳಿದ್ದಾರೆ. 

ಶನಿವಾರದ ಪ್ರತಿಭಟನೆ ಎರಡನೇಯ ಬಾರಿ ನಡೆಯುತ್ತಿರುವ ಪ್ರತಿಭಟನೆಯಾಗಿದ್ದು, ಕಾಬೂಲ್ ನಲ್ಲಿ ಕಳೆದ ವಾರ ಇಂಥಹದ್ದೇ ಪ್ರತಿಭಟನೆ ನಡೆದಿತ್ತು. 

SCROLL FOR NEXT