ವಿದೇಶ

ರಷ್ಯಾ ಸಂಸತ್ ಚುನಾವಣೆ: ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪಕ್ಷ ಮತ್ತೆ ಅಧಿಕಾರಕ್ಕೇರುವುದು ನಿಚ್ಚಳ: ಚುನಾವಣೆಗೂ ಮುನ್ನ ವಿರೋಧಿಗಳನ್ನು ಬೇಟೆಯಾಡಿದ ಪುತಿನ್

Harshavardhan M

ಮಾಸ್ಕೊ: ಕಳೆದ ಮೂರು ದಿನಗಳಿಂದ ನಡೆದ ಮತದಾನದ ನಂತರ ರಷ್ಯಾ ಅಧ್ಯಕ್ಷ ಪುತಿನ್ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ. ಭಾನುವಾರ ರಾತ್ರಿ 8 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.

ಪುತಿನ್ ಅವರ ರಾಜಕೀಯ ಎದುರಾಳಿಯಾಗಿದ್ದ ಅಲೆಕ್ಸಿ ನವಾಲ್ನಿಯವರನ್ನು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿಗಟ್ಟಲಾಗಿತ್ತು. ಅಲ್ಲದೆ ನವಾಲ್ನಿ ಅವರ ಸಂಘಟನೆಗಳು, ರಾಜಕೀಯ ಕಚೇರಿಗಳನ್ನು ಪುತಿನ್ ಸರ್ಕಾರ ತೀವ್ರವಾದಿ ಆರೋಪದ ಮೇಲೆ ಮುಚ್ಚಿಸಿತ್ತು. ನವಾಲ್ನಿ ಪರ ಪ್ರತಿಭಟನೆ ಮಾಡುವವರನ್ನು ತೀವ್ರಗಾಮಿಗಳೆಂದು ಬಂಧಿಸಿತ್ತು.

ಮತದಾನ ನಡೆಯುವುದಕ್ಕೂ ಮುನ್ನ ದೇಶದಲ್ಲಿ ಉಳಿದಿದ್ದ ತನ್ನ ವಿರೋಧಿಗಳನ್ನು ಪುತಿನ್ ಬಂಧಿಸಿ ಜೈಲಿಗಟ್ಟಿದ್ದರು, ಅವರಲ್ಲಿ ಅನೇಕರು ಪುತಿನ್ ಪ್ರತೀಕಾರಕ್ಕೆ ಬೆದರಿ ದೇಶದಿಂದ ಪಲಾಯನಗೈದವರೂ ಇದ್ದಾರೆ. ಈ ನಡುವೆ ಪುತಿನ್ ಚುನಾವಣಾ ಅಕ್ರಮ ಎಸಗಿದ್ದಾರೆ ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. 

ವಿರೋಧ ಪಕ್ಷದ ಬೆಂಬಲಿಗರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವುದು ಸೇರಿದಂತೆ ಹಲವು ಅನಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

SCROLL FOR NEXT