ವಿದೇಶ

ದಕ್ಷಿಣ ಕೊರಿಯ ನಮಗೆ ಮರ್ಯಾದೆ ಕೊಟ್ಟರೆ ಮಾತ್ರ ಮಾತುಕತೆ: ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಸಹೋದರಿ

Harshavardhan M

ಸಿಯೋಲ್: ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೊ ಜಾಂಗ್ ದಕ್ಷಿಣ ಕೊರಿಯ ತಮ್ಮ ದೇಶಕ್ಕೆ ಮರ್ಯಾದೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ.ಕೊರಿಯ ನಮಗೆ ಮರ್ಯಾದೆ ಕೊಟ್ತರೆ ಮಾತ್ರ ಅವರೊಂದಿಗೆ ಮಾತುಕತೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. 

ದ. ಕೊರಿಯ ಜೊತೆ ಮಾತುಕತೆ ಮುಂದುವರಿಯಬೇಕಾದರೆ ಹಲವು ಷರತ್ತುಗಳಿಗೆ ದ. ಕೊರಿಯ ಬದ್ಧತೆ ಪ್ರದರ್ಶಿಸಬೇಕು ಎಂದು ಕಿಮ್ ಯೊ ಜಾಂಗ್ ಹೇಳಿದ್ದಾರೆ. 

ದ.ಕೊರಿಯ ಮತ್ತು ಅಮೆರಿಕ ಒಂದಾಗಿ ಉತ್ತರ ಕೊರಿಯ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದವು. ಎರಡು ದೇಶಗಳು ಜಂಟಿ ಸಮರಾಭ್ಯಾಸದಲ್ಲಿ ತೊಡಗಿದ್ದವು. ಅಲ್ಲದೆ ಉ.ಕೊರಿಯ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಯೋಜನೆಯಲ್ಲಿ ತೊಡಗಿದ್ದರಿಂದ ಅಮೆರಿಕ ನಿರ್ಬಂಧ ವಿಧಿಸಿತ್ತು. ಅದನ್ನು ಹಿಂಪಡೆಯುವಂತೆ ಮಾಡಲು ಉ.ಕೊರಿಯ ತಲೆಕೆಡಿಸಿಕೊಂಡಿದೆ. 

SCROLL FOR NEXT