ವಿದೇಶ

ಅಪರಿಚಿತನಿಂದ ರೋಹಿಂಗ್ಯಾ ನಿರಾಶ್ರಿತರ ನಾಯಕನನ್ನು ಗುಂಡಿಕ್ಕಿ ಹತ್ಯೆ: ಆಮ್ನೆಸ್ಟಿ ಖಂಡನೆ

Harshavardhan M

ಧಾಕಾ: ಮ್ಯಾನ್ಮಾರ್ ನ ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಂ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿದ್ದ ಮೊಹಿಬುಲ್ಲಾರನ್ನು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಮೊಹಿಬುಲ್ಲ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರೋಹಿಂಗ್ಯಾಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ದನಿಯೆತ್ತಿ ಮಾತನಾಡಿದ್ದರು. 2019ರಲ್ಲಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿ ಅಧ್ಯಕ್ಷ ಟ್ರಂಪ್ ಅವರ ಜೊತೆ ಮಾತುಕತೆ ನಡೆಸಿದ್ದರು.

ಮ್ಯಾನ್ಮಾರ್ ನಲ್ಲಿ ಸೇನಾಡಳಿತ ಹೇರಿಕೆಯಾದುದನ್ನು ಪ್ರತಿಭಟಿಸಿ ಮೊಹಿಬುಲ್ಲ ಅವರು ಬಾಂಗ್ಲಾದಲ್ಲಿ ರಾಲಿ ನಡೆಸಿದ್ದರು. 2,00,000 ಮಂದಿ ರೋಹಿಂಗ್ಯಾಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದು ಬಾಂಗ್ಲಾ ಮಾಧ್ಯಮಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಧಾಕಾದ ಕಾಕ್ಸ್ ಬಜಾರ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ 40ರ ಯುವನಾಯಕ ಮೊಹಿಬುಲ್ಲ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.

SCROLL FOR NEXT