ವಿದೇಶ

ಇಂಗ್ಲೆಂಡ್ ಪ್ರಧಾನಿ ರೇಸ್: ಲಿಜ್ ಟ್ರಸ್ ವಿರುದ್ಧ ಟಿವಿ ಚರ್ಚೆಯಲ್ಲಿ ಗೆದ್ದ ರಿಷಿ ಸುನಕ್, ಪ್ರಧಾನಿ ಹುದ್ದೆಗೇರುವ ಹಾದಿ ಸುಗಮ

Sumana Upadhyaya

ಲಂಡನ್: ಇಂಗ್ಲೆಂಡಿನಲ್ಲಿ ಪ್ರಧಾನಿ ಗದ್ದುಗೆಯನ್ನು ಯಾರು ಏರುತ್ತಾರೆ ಎಂದು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಮಾಜಿ ಚಾನ್ಸೆಲರ್ ರಿಷಿ ಸುನಕ್ ಹಾದಿ ಸುಗಮವಾಗುತ್ತಾ ಸಾಗುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ಸ್ ಅವರೊಂದಿಗೆ ನಡೆಸಿದ ಟೆಲಿವಿಷನ್ ಮುಖಾಮುಖಿ ಸಂವಾದದಲ್ಲಿ ಕನ್ಸರ್ವೇಟಿವ್ ಪಾರ್ಟಿ ಸದಸ್ಯ ರಿಷಿ ಸುನಕ್ ಸುಲಭವಾಗಿ ಮುನ್ನಡೆ ಸಾಧಿಸಿದ್ದಾರೆ.

ನಿನ್ನೆ ಗುರುವಾರ ರಾತ್ರಿ ಸ್ಕೈ ನ್ಯೂಸ್‌ನಲ್ಲಿನ 'ಬ್ಯಾಟಲ್ ಫಾರ್ ನಂಬರ್ 10' ನಲ್ಲಿ ಅಂತಿಮ ಸ್ಪರ್ಧಿಗಳನ್ನು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವ ಆದರೆ ಅವರ ಆಯ್ಕೆಯ ಬಗ್ಗೆ ಹೆಚ್ಚಾಗಿ ನಿರ್ಧರಿಸದ ಕನ್ಸರ್ವೇಟಿವ್ ಸದಸ್ಯರೊಂದಿಗೆ ಮುಖಾಮುಖಿ ಕಾರ್ಯಕ್ರಮ ನೆರವೇರಿತ್ತು.

ಬೊರಿಸ್ ಜಾನ್ಸನ್ ಅವರ ಬದಲಿಗೆ ತಾವೇಕೆ ಪ್ರಧಾನಿಯಾಗಬೇಕೆಂದು ಇಬ್ಬರೂ ಸ್ಪರ್ಧಿಗಳು ತಮ್ಮ ತಮ್ಮ ವಾದ ಮುಂದಿಟ್ಟರು. ಪ್ರೇಕ್ಷಕರಲ್ಲಿ ಸಂವಾದದಲ್ಲಿ ಯಾರು ಗೆಲುವು ಸಾಧಿಸಿದ್ದಾರೆ ಎಂದು ಕೇಳಲಾಯಿತು, ಆಗ ಅವರು ರಿಷಿ ಸುನಕ್ ಅವರನ್ನು ಆರಿಸಿದರು.

ಇತ್ತೀಚಿನ ಸಮೀಕ್ಷೆಗಳಲ್ಲಿ ಟ್ರಸ್‌ಗಿಂತ ಹಿಂದುಳಿದಿರುವ ಭಾರತೀಯ ಮೂಲದ ಬ್ರಿಟನ್ ಮಾಜಿ ಸಚಿವರಿಗೆ ಇದು ಉತ್ತೇಜನಕಾರಿಯಾಗಿದೆ, ಇತ್ತೀಚಿನ ಕೊನೆಯ ಸಮೀಕ್ಷೆಯು ಸುನಕ್‌ಗಿಂತ ಶೇಕಡಾ 32ರಷ್ಟು ಟ್ರಸ್ ಮುಂದಿದ್ದರು. 

SCROLL FOR NEXT