ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ರಶ್ದಿ ಮೇಲೆ ದಾಳಿ ನಡೆಸಿದನ ವಿರುದ್ಧ ಹತ್ಯೆ ಯತ್ನ ಪ್ರಕರಣ

ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ 24 ವರ್ಷಗಳ ನ್ಯೂ ಜೆರ್ಸಿ ವ್ಯಕ್ತಿಯ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಮನೆ ಬಳಿ ಪೊಲೀಸ್
Srinivas Rao BV
Updated On : 13 Aug 2022, 10:58 pm

ನ್ಯೂಯಾರ್ಕ್:  ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ 24 ವರ್ಷಗಳ ನ್ಯೂ ಜೆರ್ಸಿ ವ್ಯಕ್ತಿಯ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಲಾಗಿದ್ದು, ಜಾಮೀನು ರಹಿತವಾಗಿ ಜೈಲಿಗೆ ಕಳಿಸಲಾಗಿದೆ. 

ನ್ಯೂ ಯಾರ್ಕ್ ಸ್ಟೇಟ್ ಪೊಲೀಸರು ದಾಳಿಯ ತನಿಖೆಯನ್ನು ನಡೆಸುತ್ತಿದ್ದು, ಫೇರ್‌ವ್ಯೂನ ಹಾದಿ ಮಾತರ್ ಎಂಬುವವನನ್ನು ಬಂಧಿಸಲಾಗಿದೆ.  

ಇದನ್ನೂ ಓದಿ: ಇದನ್ನೂ ಓದಿ: ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ: ಪರಿಸ್ಥಿತಿ ಗಂಭೀರ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ, ದಾಳಿಕೋರನ ಬಂಧನ

Advertisement

Advertisement

ಹಾದಿ ಮಾತರ್ ವಿರುದ್ಧ ದ್ವಿತೀಯ ದರ್ಜೆ ಹತ್ಯೆ ಯತ್ನ ಹಾಗೂ ಹಲ್ಲೆಯ ಪ್ರಕರಣ ದಾಖಲಾಗಿದ್ದು, ಚೌಟಕ್ವಾ ಕೌಂಟಿ ಜೈಲಿನಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 'ದಿ ಸೈಟಾನಿಕ್ ವರ್ಸಸ್' ಪುಸ್ತಕಕ್ಕೆ ಸಂಬಂಧಿಸಿದಂತೆ ಹಲವು ಬೆದರಿಕೆಗಳನ್ನು ಎದುರಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement