ವಿದೇಶ

ಮ್ಯಾನ್ಮಾರ್: ಭ್ರಷ್ಟಾಚಾರ ಆರೋಪ, ಸೂಕಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

Nagaraja AB

ಬ್ಯಾಂಕಾಕ್:  ಭಾರೀ ಭ್ರಷ್ಟಾಚಾರ ಆರೋಪದಲ್ಲಿ ಈಗಾಗಲೇ ಆರು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮಿಲಿಟರಿ ಆಡಳಿತದ ಮ್ಯಾನ್ಮಾರ್ ನ ನ್ಯಾಯಾಲಯವೊಂದು ಸೋಮವಾರ ಮತ್ತೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.  

ಗೋಪ್ಯವಾಗಿ ನಡೆದ ವಿಚಾರಣೆಯಲ್ಲಿ ಒಟ್ಟು ನಾಲ್ಕು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ  ಶಿಕ್ಷೆ ಪ್ರಕಟಿಸಲಾಗಿದೆ. ಒಟ್ಟಾರೇ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಮೀನೊಂದನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡಿ, ದಾನದ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ದೇಣಿಗೆಯಿಂದ ವಸತಿ ಕಟ್ಟಡ ನಿರ್ಮಿಸಿದ ಆರೋಪದ ಮೇರೆಗೆ ಸೂಕಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

SCROLL FOR NEXT