ವಿದೇಶ

ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ, 5 ಅಪ್ರಾಪ್ತರ ಸಾವು: ವರದಿಗಳು 

Srinivas Rao BV

ಜೆಬಾಲಿಯಾ: ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಐವರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಪ್ರಕಟವಾಗಿದೆ.
 
ಈ ಬಗ್ಗೆ ಪ್ಯಾಲೆಸ್ಟೇನಿಯನ್ ಮಾನವ ಹಕ್ಕುಗಳ ಸಂಘಟನೆ ಹಾಗೂ ಇಸ್ರೇಲಿ ಸುದ್ದಿ ಪತ್ರಿಕೆ ವರದಿ ಪ್ರಕಟಿಸಿದ್ದು, ಸ್ಮಷಾನದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿವೆ. 

ಇಸ್ರೇಲ್ ನ ಸೇನೆ ಈ ಬಗ್ಗೆ ಹೇಳಿಕೆ ನೀಡಿದ್ದು, ಪ್ಯಾಲೆಸ್ಟೇನ್ ನ ಇಸ್ಲಾಮಿಕ್ ಜಿಹಾದಿ ಸೇನಾ ಗುಂಪಿನಿಂದ ತಪ್ಪಾಗಿ ಕ್ಷಿಪಣಿಗಳು ಸಿಡಿದಿರುವ ಕಾರಣ ಈ ಘಟನೆ ನಡೆದಿರಬಹುದು ಎಂದು ಹೇಳಿದೆ.

4-16 ವಯಸ್ಸಿನ 5 ಮಕ್ಕಳು ಸಾವನ್ನಪ್ಪಿದ್ದು, ಅವರು ತಮ್ಮ ಅಜ್ಜನ ಸಮಾಧಿ ಬಳಿ ಸೇರಿದ್ದರು, ಆಗ ಈ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕೂ ಮೂರು ದಿನಗಳ ಹಿಂದೆ ಪ್ಯಾಲೆಸ್ಟೇನ್ ಕದನ ವಿರಾಮ ಘೋಷಿಸಿತ್ತು.
 

SCROLL FOR NEXT