ಸಂಗ್ರಹ ಚಿತ್ರ 
ವಿದೇಶ

ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುವಾಗ ಕುಸಿದು ಭಾರತ ಮೂಲದ ಮೂವರ ಸಾವು

ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಭಾರತ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಭಾರತ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಅರಿಜೋನಾ ರಾಜ್ಯದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನಿಯನ್ ಸರೋವರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಒಬ್ಬ ಮಹಿಳೆ ಸೇರಿ ಭಾರತ ಮೂಲದ ಮೂವರು ಮೃತಪಟ್ಟಿದ್ದಾರೆ.

‘ಮೃತರನ್ನು ನಾರಾಯಣ ಮುದ್ದನ(49), ಗೋಕುಲ್ ಮೆದಿಸೇಟಿ(47) ಮತ್ತು ಹರಿತಾ ಮುದ್ದನ ಎಂದು ಗುರುತಿಸಲಾಗಿದೆ. ಮೃತರು ಅರಿಜೋನಾದ ಚಾಂಡ್ಲರ್ ನಿವಾಸಿಗಳಾಗಿದ್ದು, ಭಾರತ ಮೂಲದವರಾಗಿದ್ದಾರೆ’ ಎಂದು ಕೊಕಿನಿನೊ ಕೌಂಟಿ ಪೊಲೀಸ್ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸರೋವರಕ್ಕೆ ಬಿದ್ದ ಹರಿತಾ ಮುದ್ದನ ಅವರನ್ನು ಮೇಲೆತ್ತುವಲ್ಲಿ ಸಿಬ್ಬಂದಿ ಯಶಸ್ವಿಯಾದರೂ, ಆದರೆ, ಜೀವ ಉಳಿಸುವ ಎಲ್ಲ ತಕ್ಷಣದ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕ ಮತ್ತು ಕೆನಡಾದ ಹಲವೆಡೆ ಶೀತ ಮಾರುತದ ಅಬ್ಬರ ಜೋರಾಗಿದ್ದು, ಸುಮಾರು 25 ಕೋಟಿ ಜನರು ಇದರ ಹೊಡೆತಕ್ಕೆ ಸಿಲುಕಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT