ಆಂಗ್ ಸಾನ್ ಸೂಕಿ 
ವಿದೇಶ

'ಭ್ರಷ್ಟಾಚಾರದ ತಪ್ಪಿತಸ್ಥೆ': ಆಂಗ್ ಸಾನ್ ಸೂಕಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಜುಂಟಾ ಕೋರ್ಟ್

ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ನ ನ್ಯಾಯಾಲಯವು ಶುಕ್ರವಾರ ದೇಶದ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರದ ಅಪರಾಧಿ ಎಂದು ಘೋಷಿಸಿದ್ದು, ಅವರ ವಿರುದ್ಧದ ಕ್ರಿಮಿನಲ್ ಕೇಸಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. 

ಬ್ಯಾಂಕಾಕ್: ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ನ ನ್ಯಾಯಾಲಯವು ಶುಕ್ರವಾರ ದೇಶದ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರದ ಅಪರಾಧಿ ಎಂದು ಘೋಷಿಸಿದ್ದು, ಅವರ ವಿರುದ್ಧದ ಕ್ರಿಮಿನಲ್ ಕೇಸಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. 

ನ್ಯಾಯಾಲಯದ ಆದೇಶದಿಂದ ಅವರಿಗೆ 33 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸುತ್ತದೆ. ಕಳೆದ ಫೆಬ್ರವರಿ 2021 ರಲ್ಲಿ ಅವರ ಚುನಾಯಿತ ಸರ್ಕಾರವನ್ನು ಮಿಲಿಟರಿ ಸೇನೆಯು ಉರುಳಿಸಿತ್ತು. 

ಇಂದು ಕೊನೆಗೊಂಡ ಪ್ರಕರಣ ವಿಚಾರಣೆಯಲ್ಲಿ ಭ್ರಷ್ಟಾಚಾರ-ವಿರೋಧಿ ಕಾನೂನಿನಡಿಯಲ್ಲಿ ಐದು ಅಪರಾಧಗಳನ್ನು ಒಳಗೊಂಡಿತ್ತು. ಏಳು ಇತರ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಿಂದಿನ ಅಪರಾಧಗಳನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಪ್ರತಿಯೊಂದು ಪ್ರಕರಣಕ್ಕೂ 15 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತದೆ.

ಕಾನೂನುಬಾಹಿರವಾಗಿ ಆಮದು ಮಾಡಿಕೊಳ್ಳುವುದು ಮತ್ತು ವಾಕಿ-ಟಾಕಿಗಳನ್ನು ಹೊಂದುವುದು, ಕೊರೋನಾವೈರಸ್ ನಿರ್ಬಂಧಗಳನ್ನು ಉಲ್ಲಂಘಿಸುವುದು, ದೇಶದ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸುವುದು, ದೇಶದ್ರೋಹ ಮತ್ತು ಚುನಾವಣಾ ವಂಚನೆ ಸೇರಿದಂತೆ ಹಲವಾರು ಇತರ ಅಪರಾಧಗಳಿಗೆ ಆಂಗ್ ಸಾನ್ ಸೂಕಿಯವರಿಗೆ ಶಿಕ್ಷೆ ವಿಧಿಸಲಾಗಿದೆ. 

ಅವರ ಹಿಂದಿನ ಎಲ್ಲಾ ಅಪರಾಧಗಳು ಒಟ್ಟು ಸೇರಿ 26 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಸೂ ಕಿ ಅವರ ಬೆಂಬಲಿಗರು ಮತ್ತು ಸ್ವತಂತ್ರ ವಿಶ್ಲೇಷಕರು ಅವರ ಮತ್ತು ಅವರ ಮಿತ್ರರಾಷ್ಟ್ರಗಳ ವಿರುದ್ಧದ ಹಲವಾರು ಆರೋಪಗಳನ್ನು ಮಾಡಿದ್ದು, ಮುಂದಿನ ವರ್ಷಕ್ಕೆ ಭರವಸೆ ನೀಡಿರುವ ಚುನಾವಣೆಯ ಮೊದಲು ಅವರನ್ನು ರಾಜಕೀಯದಿಂದ ಹೊರಹಾಕುವ ಸಂದರ್ಭದಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಳ್ಳುವುದನ್ನು ಕಾನೂನುಬದ್ಧಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳುತ್ತಾರೆ.

ಇಂದು ನಿರ್ಧರಿಸಿದ ಐದು ಭ್ರಷ್ಟಾಚಾರದ ಎಣಿಕೆಗಳಲ್ಲಿ, ಸೂ ಕಿ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು ಮತ್ತು ಅವರ ಹಿಂದಿನ ಸರ್ಕಾರದಲ್ಲಿ ಕ್ಯಾಬಿನೆಟ್ ಸದಸ್ಯರಾಗಿದ್ದ ವಿನ್ ಮಯತ್ ಆಯೆ ಅವರಿಗೆ ನೇಮಕ ಮಾಡಲು ಅನುಮತಿ ನೀಡುವಲ್ಲಿ ಹಣಕಾಸಿನ ನಿಯಮಗಳನ್ನು ಅನುಸರಿಸಲು ನಿರ್ಲಕ್ಷಿಸಿ ರಾಜ್ಯ ನಿಧಿಯ ನಷ್ಟವನ್ನು ಉಂಟುಮಾಡಿದರು. ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರ ಎಸಗಿದ್ದರು ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT