ರಿಷಿ ಸುನಕ್ 
ವಿದೇಶ

ಕನ್ಸರ್ವೇಟೀವ್ ಪಕ್ಷದ ನಾಯಕತ್ವದ ಚುನಾವಣೆಯ ಮೊದಲ ಸುತ್ತಿನಲ್ಲಿ ರಿಷಿ ಸುನಕ್ ಗೆ ಗೆಲುವು

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮಾಜಿ ಚಾನ್ಸಿಲರ್ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮಾಜಿ ಚಾನ್ಸಿಲರ್ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಕನ್ಸರ್ವೇಟೀವ್ ಪಕ್ಷದ ಸಂಸದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಮತಗಳು ಅಂದರೆ 88 ಮತಗಳು ರಿಷಿ ಸುನಕ್ ಪರವಾಗಿ ಚಲಾವಣೆಯಾಗಿದ್ದು, ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳ ಸಂಖ್ಯೆ 8 ರಿಂದ 6 ಕ್ಕೆ ಇಳಿಕೆಯಾಗಿದೆ.
 
ಭಾರತೀಯ ಮೂಲದ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್ಮನ್, ಟ್ರೇಡ್ ಸಚಿವ ಪೆನ್ನಿ ಮೋರ್ಡೌಂಟ್ (67 ಮತಗಳು) ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (50 ಮತಗಳು) ಮಾಜಿ ಸಚಿವ ಕೆಮಿ ಬಡೆನೊಚ್ (40 ಮತಗಳು) ಹಾಗೂ ಟಾಮ್ ತುಗೇಂಧತ್ (37 ಮತಗಳು) ರೇಸ್ ನಲ್ಲಿದ್ದಾರೆ.

ಹೊಸದಾಗಿ ನೇಮಕಗೊಂಡಿರುವ ಚಾನ್ಸಿಲರ್ ನದೀಮ್ ಜಹಾವಿ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಕನಿಷ್ಠ ಅಗತ್ಯವಿರುವ 30 ಸಂಸದರ ಬೆಂಬಲವನ್ನು ಪಡೆಯುವಲ್ಲಿ ವಿಫಲರಾಗಿದ್ದು ಪ್ರಧಾನಿ ರೇಸ್ ನಿಂದ ಹೊರಬಂದಿದ್ದಾರೆ.

ಪ್ರಧಾನಿ ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಅವರು ನಿರಂತರತೆ ಕಾಯ್ದುಕೊಂಡಿದ್ದು, ಮೊದಲ ಹಂತದ ಮತದಾನದ ಫಲಿತಾಂಶದ ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಸಂತಸ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಪ್ರಧಾನಿ ಹುದ್ದೆಯಲ್ಲಿ ಅಂತಿಮವಾಗಿ ಇರಲಿರುವ ಮೂವರು ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಕೂಡಾ ಒಬ್ಬರಾಗಿರಲಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT