ವಿದೇಶ

ರಷ್ಯಾ ಜೊತೆ ಎಸ್-400 ಕ್ಷಿಪಣಿ ಒಪ್ಪಂದದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯಿತಿ; ತಿದ್ದುಪಡಿ ಮಸೂದೆಗೆ ಅಮೆರಿಕ ಅಂಗೀಕಾರ

Nagaraja AB

ವಾಷಿಂಗ್ಟನ್: ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಗುರುವಾರ ಧ್ವನಿಮತದ ಅಂಗೀಕಾರ ದೊರೆತಿದೆ.

ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಟ್ಟಿದೆ.

2014ರಲ್ಲಿ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ಮತ್ತು 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದ ರಷ್ಯಾ ಕ್ರಮಕ್ಕೆ ಪ್ರತಿಯಾಗಿ ಆ ದೇಶದಿಂದ ಪ್ರಮುಖ ರಕ್ಷಣಾ ಯಂತ್ರಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಕಾಟ್ಸಾ ಅಮೆರಿಕ ಆಡಳಿತಕ್ಕೆ ಅಧಿಕಾರ ನೀಡುವ ಕಠಿಣ ಕಾನೂನು ಆಗಿದೆ. 

ಚೀನಾದಿಂದ ಆಕ್ರಮಣವನ್ನು ಎದುರಿಸುವಲ್ಲಿ ಭಾರತದೊಂದಿಗೆ ಅಮೆರಿಕ ನಿಲ್ಲಲಿದೆ. ಇಂಡಿಯಾ ಕಾಕಸ್ ನ ಉಪಾಧ್ಯಕ್ಷನಾಗಿ ನಮ್ಮ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಚೀನಾದ ಗಡಿಯಲ್ಲಿ ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ ಎಂದು ಕ್ಯಾಲಿಫೋರ್ನಿಯಾದ 17ನೇ ಕಾಂಗ್ರೆಸ್ ಜಿಲ್ಲೆಯ ಅಮೆರಿಕದ ಪ್ರತಿನಿಧಿ ಖನ್ನಾ ಹೇಳಿದರು.

ಈ ತಿದ್ದುಪಡಿಯು ಅತ್ಯಂತ ಮಹತ್ವದ್ದಾಗಿದ್ದು, ದ್ವಿಪಕ್ಷೀಯ ಆಧಾರದ ಮೇಲೆ ಸದನ ಅಂಗೀಕರಿಸಿದ್ದನ್ನು ಕಂಡು ನನ್ನಗೆ ಹೆಮ್ಮೆಯಾಗಿದೆ ಎಂದರು. ಅಕ್ಟೋಬರ್ 2018ರಲ್ಲಿ ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಷೆಗಳ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು.

SCROLL FOR NEXT