ಹೊಸ ಸುಖೊಯ್-30 ಮತ್ತೆ ಹಾರುವಂತೆ ಮಾಡಲು ಭಾರತಕ್ಕೆ ಬಿಡಿಭಾಗಗಳನ್ನು ಮಾರುವುದೆ ರಷ್ಯಾ?
ಭಾರತವು ತನ್ನ ತೈಲ ಆಮದುಗಳು ಮತ್ತು ಅತ್ಯಾಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳಿಗಾಗಿ ಹೆಚ್ಚು ಅವಲಂಬಿತವಾಗಿರುವುದು ರಷ್ಯಾ ಮತ್ತು ಅಮೆರಿಕಾ ಮೇಲೆ. ಬಹುಶಃ ಇದೇ ಕಾರಣಕ್ಕಾಗಿ, ಪ್ರಸ್ತುತ ನಡೆದಿರುವ ಯುದ್ಧದ ಬಗ್ಗೆ ಪ್ರಬಲವಾದ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭ ಬಂದಾಗ ಭಾರತ ತಟಸ್ಥ ಧೋರಣೆ ತೋರುತ್ತಿದೆ.
Published: 05th April 2022 03:06 PM | Last Updated: 29th April 2022 05:51 PM | A+A A-

ಸುಖೊಯ್-30
- ಗಿರೀಶ್ ಲಿಂಗಣ್ಣ,
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತವು 12 ರಷ್ಯಾ-ವಿನ್ಯಾಸಗೊಳಿಸಿದ ಸುಖೊಯ್-30 ಎಮ್ ಕೆ ಐ ಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತೀಯ ವಾಯುಪಡೆ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಶೀಘ್ರದಲ್ಲೇ ಭಾರತ ಖರೀದಿಯ ವ್ಯವಹಾರಕ್ಕೆ ಸಹಿ ಹಾಕಲಿದೆ ಎಂದು ವರದಿಯಾಗಿದ್ದು, ಈ ವ್ಯವಹಾರ ರೂ 10,000 ಕೋಟಿ ಮೊತ್ತದ್ದಾಗಿದೆ. ಆದರೆ ವ್ಯವಹಾರಕ್ಕೆ ಯಾವಾಗ ಸಹಿ ಹಾಕಲಾಗುವುದು ಎಂಬುದನ್ನು ಭಾರತ ಇಲ್ಲಿಯವರೆಗೆ ನೇರವಾಗಿ ಘೋಷಿಸಿಲ್ಲ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದಿರುವ ಯುದ್ಧದ ಮಧ್ಯೆ ಈ ಖರೀದಿ ಅವಸರದ ನಿರ್ಧಾರವೆ ಸರಿ. ಐಎಎಫ್ ಬಳಿ ಮಾನವ ಸಂಪನ್ಮೂಲ ಮತ್ತು ಯಂತ್ರಗಳ ಕೊರತೆ ಇದೆ. ಐ ಎ ಎಫ್ ಪ್ರಕಾರ ಅದರ ಬಳಿ 40 ವಿಮಾನಗಳಿರಬೇಕಿತ್ತು, ಆದರೆ ವಿಮಾನಗಳ ಸಂಖ್ಯೆ 30 ಅಥವಾ 32 ಕ್ಕೆ ಇಳಿಕೆಯಾಗಿರುವುದರಿಂದ ಹೆಚ್ಚುವರಿ ಸುಖೊಯ್ ತಕ್ಷಣ ಖರೀದಿಸುವ ಅವಶ್ಯಕತೆಯಿದೆ. ಭಾರತದ ಸಶಸ್ತ್ರ ಪಡೆಗಳು ಎಚ್ಚರದಿಂದಿರುವ ತೀವ್ರ ಒತ್ತಡವಿದೆ.
ಐಎಎಫ್ ಬಳಿ 4.5-ಜನರೇಶನ್ ರಫೇಲ್ ನ ಕೇವಲ ಎರಡು ಸ್ಕ್ವಾಡ್ರನ್ ಗಳು, ಟ್ವಿನ್-ಎಂಜಿನ್ ಕಾಂಬ್ಯಾಟ್ ಜೆಟ್ ಇವೆ, ಮತ್ತು 2024 ರ ಹೊತ್ತಿಗೆ ಬಾಳಿಕೆ ಅವಧಿ ಮುಕ್ತಾಯವಾಗುವ ನಿರೀಕ್ಷೆ ಇರುವ ಹಳೆಯ ಏರ್ ಕ್ರಾಫ್ಟ್ ಆದ ನವೀಕೃತ ಮಿಗ್-21 ಬೈಸನ್ ಉಪಯೋಗಿಸುತ್ತಿದೆ.
ಇದೇ ಕಾರಣಕ್ಕಾಗಿ ಐಎಎಫ್ ಡಜನ್ ಗಟ್ಟಲೆ ಸುಖೊಯ್-30 ಎಮ್ ಕೆ ಐ ಖರೀದಿಸುವ ಮೂಲಕ ತನ್ನ ಫ್ಲೀಟ್ ಅನ್ನು ಬಲಪಡಿಸವಲು ತೀವ್ರ ಒತ್ತಡದಲ್ಲಿದೆ. ಫೈಟರ್ ಗಳನ್ನು ರಷ್ಯಾ ವಿನ್ಯಾಸಗೊಳಿಸಿದೆ ಮತ್ತು ದೇಶೀಯವಾಗಿ ಇಸ್ರೇಲ್ ನಿಂದ ವಿನ್ಯಾಸಗೊಳಿಸಲಾದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿಸಿದ ಸಿಸ್ಟಮ್ ಗಳನ್ನು ಒಳಗೊಂಡಿವೆ.
ಯುದ್ಧ ನಡೆದಿದ್ದರೂ ಮತ್ತು ಪಾಶ್ಚಾತ್ಯ ರಾಷ್ಟ್ರಗಳೆಲ್ಲಾ ರಷ್ಯಾದ ವಿರುದ್ಧ ಇದ್ದರೂ ಭಾರತ ಖರೀದಿಸಲು ಕಾತುರವಾಗಿರುವ ಈ ಸುಖೊಯ್ ಗಳಲ್ಲಿ ಅಂತಹ ವಿಶೇಷವೇನಿದೆ? ಸುಖೊಯ್ ಸು-30 ಎಮ್ ಕೆ ಐ ಅತ್ಯಂತ ಮುಂದುವರಿದ ಫೈಟರ್ ಜೆಟ್ ಆಗಿದ್ದು ಏರ್-ಟು-ಏರ್ ಮತ್ತು ಏರ್-ಟು-ಗ್ರೌಂಡ್ ದಾಳಿ ಮಾಡುವ ಯಂತ್ರವಾಗಿ ಕೆಲಸ ಮಾಡುತ್ತದೆ. ಇದನ್ನು ರಷ್ಯಾದ ಸುಖೊಯ್ ನೊಂದಿಗೆ ಪರವಾನಗಿ ಒಪ್ಪಂದದಡಿ ಭಾರತದಲ್ಲಿ ಎಚ್ ಎ ಎಲ್ ನಿರ್ಮಿಸಿದೆ. ಐಎಎಫ್ ಬಳಿ ಫ್ಲ್ಯಾಂಕರ್ ಎಂದೂ ಕರೆಯಲಾಗುವ ಸುಖೊಯ್ 30ಎಮ್ ಕೆ ಐ ನ 290 ಕಾರ್ಯಾಚರಣೆ ಘಟಕಗಳನ್ನು ಹೊಂದಿದೆ ಎಂದು ವರದಿ ಮಾಡಲಾಗಿದೆ. ಮೊದಲ ಘಟಕವನ್ನು 2002 ರಲ್ಲಿ ಪರಿಚಯಿಸಲಾಯಿತು. ಅದರ ವೇಗ 2120 ಕಿ.ಮೀ. ಪ್ರ.ಗಂ. ಇದ್ದು, ಅದರ ಟೇಕ್ ಆಫ್ ತೂಕ 38,800 ಕೆಜಿ ಇರುತ್ತದೆ. ಅದು ರಡಾರ್ ಗಳಿಂದ ಹಿಡಿದು ಕ್ಷಿಪಣಿಗಳು, ಬಾಂಬ್ ಗಳಿಂದ ಹಿಡಿದು ರಾಕೆಟ್ ಗಳವರೆಗೆ ಏನನ್ನು ಬೇಕಾದರೂ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಆದರೆ ಸದ್ಯದ ಗೊಂದಲದ ಪರಿಸ್ಥಿತಿಯಲ್ಲಿ, ಐಎಎಫ್ ಗೆ ಅಗತ್ಯವಿರುವ ಬಿಡಿಭಾಗಗಳನ್ನು ಮತ್ತು ಉಪಕರಣಗಳನ್ನು ರಷ್ಯಾ ಪೂರೈಸಲು ಸಾಧ್ಯವಾಗುವುದೆ? ಇದಕ್ಕೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರುವುದು ರಷ್ಯಾದ ವಿದೇಶ ಸಚಿವ ಸರ್ಗೆ ಲಾವ್ರೊವ್ ಅವರು ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ದೆಹಲಿಯಲ್ಲಿ ಮಾಡಿದ ಸಭೆಗಳ ಫಲಿತಾಂಶಗಳನ್ನು ಅವಲಂಬಿಸಿದೆ. ಅವರ ಪ್ರಮುಖ ಭೇಟಿಯ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶೀ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ದೆಹಲಿಗೆ ಬರುವ ಮೊದಲು ಅವರು ಚೀನಾದಲ್ಲಿದ್ದರು. ಈ ಎರಡೂ ದೇಶಗಳು ರಷ್ಯಾ ಪಾಲಿಗೆ ಬಹಳ ಮುಖ್ಯ, ಏಕೆಂದರೆ ಉಕ್ರೇನ್ ಮೇಲೆ ರಷ್ಯಾ ಮಾಡುತ್ತಿರುವ ದಾಳಿಯನ್ನು ಖಂಡಿಸದ ದಕ್ಷಿಣ ಏಷ್ಯಾದ ಎರಡು ಪ್ರಬಲ ದೇಶಗಳಿವು.
ಅವರು ಆಗಮಿಸುವ ಮೊದಲು ಭಾರತ ರಕ್ಷಣಾ ವ್ಯವಹಾರಗಳ ಬಗ್ಗೆ ಚರ್ಚಿಸುವುದು ಎಂಬ ನಿರೀಕ್ಷೆ ಇತ್ತು. ಯುದ್ಧದಿಂದಾಗಿ ಭಾರತ ರಷ್ಯಾದಿಂದ ಖರೀದಿಸಬೇಕಾಗಿರುವ ಪರಮಾಣು-ಚಾಲಿತ ಸಬ್ಮರಿನ್ ಗಳು, ಫೈಟರ್ ಜೆಟ್ ಗಳು, ಟ್ರಯಂಫ್ ಎಸ್-400, ಎಕೆ-203 ಅಸಾಲಟ್ ರೈಫಲ್ ಗಳು ಮತ್ತು ಇತರ ಸಾಮಗ್ರಿಗಳ ಪೂರೈಕೆ ವಿಳಂಬಗೊಂಡಿದೆ. ಈ ಸಭೆಯ ಫಲಿತಾಂಶ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿದ್ದು ಅದರಲ್ಲಿ ರಕ್ಷಣಾ ವ್ಯವಹಾರದ ಚರ್ಚೆ ಬಗ್ಗೆ ತಿಳಿಸಲಾಗಿಲ್ಲ. ಯುನೈಟೆಡ್ ಏರ್ ಕ್ರಾಫ್ಟ್ ಕಾರ್ಪೊರೇಷನ್ ಆಫ್ ರಷ್ಯಾದೊಂದಿಗಿನ ಸು-30ಎಮ್ ಕೆ ಐ ನಿರ್ವಹಣೆಯ ಐದು ವರ್ಷದ ಕರಾರು ನವೀಕರಣವಾಗಬೇಕಿದೆ. ಈ ಬಗ್ಗೆ ಸಭೆಗಳಲ್ಲಿ ಚರ್ಚಿಸಲಾಯಿತೆ ಎಂಬುದು ಕೂಡ ಅಸ್ಪಷ್ಟವಾಗಿದೆ.
ಮಾರ್ಚ್ ಮಧ್ಯದಲ್ಲಿ, ಐಎಎಫ್ ಪ್ರತಿನಿಧಿ, “ಒಂದು ಸ್ವಾರಸ್ಯಕರ ವಿಷಯವೆಂದರೆ, ದೊಡ್ಡ ಸಂಖ್ಯೆಯಲ್ಲಿ ಸುಖೊಯ್-30 ಮತ್ತು ಇತರ ಫೈಟರ್ ಗಳು ಸಿದ್ಧವಾಗಿ ನಿಂತಿವೆ, ಮತ್ತು ಅವು ಈ ವರ್ಷವಾದ ನಂತರ ನಮಗೆ ಪೂರೈಕೆಯಾಗಲು ಪ್ರಾರಂಭಿಸಿದಾಗ, ನಿಜವಾಗಿಯೂ ಅವುಗಳಿಗೆ ಕೆಲವು ಸ್ವಾಡ್ರನ್ ಗಳನ್ನು ಸೇರ್ಪಡೆ ಮಾಡಲು ಸಾಧ್ಯವಾಗುವುದೆಂದು ನಾವು ಆಶಿಸುತ್ತೇವೆ ಎಂಬುದಾಗಿ ರಕ್ಷಣಾ ಕ್ಷೇತ್ರಕ್ಕಾಗಿ ಇರುವ ಸಂಸತ್ತಿನ ಸ್ಥಾಯಿ ಸಮಿತಿಗೆ ತಿಳಿಸಿದರು.
ಹಣಕಾಸಿನ ಕೊರತೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಯುಕ್ತ ಬೆಲೆ ನಿಗದಿಪಡಿಸುವ ತಂತ್ರದ ಕೊರತೆ, ಮತ್ತು ಬಿಡಿಭಾಗಗಳು ಲಭ್ಯವಿಲ್ಲದಿರುವುದು ಇವೆಲ್ಲ ಕಳೆದ ಎರಡು ದಶಕಗಳಲ್ಲಿ ಐಎಎಫ್ ಸಮಸ್ಯೆಗಳನ್ನು ಇಮ್ಮಡಿಯಾಗಿಸಿವೆ. ಗಾಯದ ಮೇಲೆ ಬರೆ ಎಳೆದಂತೆ ಉಕ್ರೇನ್ ಯುದ್ಧ ಸಮಸ್ಯೆ ತಲೆದೋರಿತು, ಇಲ್ಲಿ ಪಾಶ್ಚಾತ್ಯ ರಾಷ್ಟ್ರಗಳೆಲ್ಲ ರಷ್ಯಾ ವಿರುದ್ಧ ಒಂದುಗೂಡಿ ನಿಂತಿವೆ. 40% ನಷ್ಟು ಸುಖೊಯ್ ಮತ್ತು ಅದರ ಜೆಟ್ ಎಂಜಿನ್ ಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಜೆಟ್ ಗಳು ಐಎಎಫ್ ನ ಬೆನ್ನೆಲುಬಿದ್ದಂತೆ. ವಾಸ್ತವದಲ್ಲಿ, ಜಗತ್ತಿನಾದ್ಯಂತ ಭಾರತ ರಫ್ತು-ಆಧರಿತ ಸುಖೊಯ್-30 ಎಮ್ ಕೆ ಐ ಅನ್ನು ಅತಿ ದೊಡ್ಡ ಪ್ರಮಾಣದಲ್ಲಿ ಬಳಸುವ ದೇಶವಾಗಿದೆ. ಮಾರ್ಚ್ 30 ರಂದು ಸು-30ಎಮ್ ಕೆ ಐ ಪುಣೆ ವಿಮಾನ ನಿಲ್ದಾಣದಲ್ಲಿ ಸಣ್ಣ ಅಪಘಾತಕ್ಕೀಡಾಯಿತು. ಅದು ಲ್ಯಾಂಡ್ ಆಗುವಾಗ ಅದರ ಒಂದು ಟಯರ್ ಸಿಡಿದು ಮೂರು ಗಂಟೆಗಳ ಕಾಲ ವಿಮಾನ ನಿಲ್ದಾಣವನ್ನು ಮುಚ್ಚಬೇಕಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಐಎಎಫ್ ಒಂದು ಪ್ಯಾರಾಗ್ರಾಫ್ ನಷ್ಟು ಹೇಳಿಕೆ ನೀಡಿತು ಮತ್ತು ಅನಂತರ ಆ ಬಗ್ಗೆ ವಿವರಣೆ ನೀಡಲಿಲ್ಲ. ಸುಖೊಯ್-30 ರಲ್ಲಿ ಉಪಯೋಗಿಸುವ ಏರೊಮಸಲ್ ಟಯರ್ ಗಳನ್ನು ಮೇದಕ್, ಹೈದರಾಬಾದ್ ನಲ್ಲಿರುವ ಎಮ್ ಆರ್ ಎಫ್ ಸೌಲಭ್ಯದಲ್ಲಿ ತಯಾರಿಸಲಾಗುತ್ತದೆ.
ಈ ಟಯರ್ ಕಪ್ಪು ಮತ್ತು ದುಂಡಗೆ ಕಂಡರೂ ಅದರಲ್ಲಿ ಹಲವಾರು ಜಟಿಲವಾದ ಜೋಡಣೆಗಳಿವೆ. ತೀವ್ರ ಪರಿಸ್ಥಿತಿಗಳಲ್ಲಿ ಸುಖೊಯ್ 30 ಪ್ರತಿ ಗಂಟೆಗೆ 420 ಕಿಮೀ ವೇಗದಲ್ಲಿ ಲ್ಯಾಂಡ್ ಆಗುವ ವೇಳೆ ಪರಿಸ್ಥಿತಿ ನಿರ್ವಹಿಸುವುದಕ್ಕಾಗಿ ಈ ಟಯರ್ ಗಳನ್ನು ಸಿದ್ಧಪಡಿಸಲಾಗಿದೆ.
ಭಾರತವು ತನ್ನ ತೈಲ ಆಮದುಗಳು ಮತ್ತು ಅತ್ಯಾಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳಿಗಾಗಿ ಹೆಚ್ಚು ಅವಲಂಬಿತವಾಗಿರುವುದು ರಷ್ಯಾ ಮತ್ತು ಅಮೆರಿಕಾ ಮೇಲೆ. ಬಹುಶಃ ಇದೇ ಕಾರಣಕ್ಕಾಗಿ, ಪ್ರಸ್ತುತ ನಡೆದಿರುವ ಯುದ್ಧದ ಬಗ್ಗೆ ಪ್ರಬಲವಾದ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭ ಬಂದಾಗ ಭಾರತ ತಟಸ್ಥ ಧೋರಣೆ ತೋರುತ್ತಿದೆ.
