ವಿದೇಶ

ಭಾರತದ ಶಂಕಿತ ಕೊಲೆಗಾರನ ಪತ್ತೆಗೆ 1 ಬಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಕ್ವಿನ್ಸ್ ಲ್ಯಾಂಡ್

Nagaraja AB

ಆಸ್ಟ್ರೇಲಿಯಾ: ನಾಲ್ಕು ವರ್ಷಗಳ ಹಿಂದೆ ಬೀಚ್ವೊಂದರಲ್ಲಿ ಆಸ್ಟ್ರೇಲಿಯಾದ ಮಹಿಳೆಯನ್ನು ಹತ್ಯೆಗೈದು ಭಾರತಕ್ಕೆ ಪಲಾಯನವಾಗಿರುವ ಭಾರತೀಯ ನರ್ಸ್ ಹುಡುಕಿ ಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ಕ್ವಿನ್ಸ್ ಲ್ಯಾಂಡ್ ಪೊಲೀಸರು ಘೋಷಿಸಿದ್ದಾರೆ.

ಅಕ್ಟೋಬರ್ 2018ರಲ್ಲಿ 24 ವರ್ಷದ ಯುವತಿ ಟೋಯಾ ಕಾರ್ಡಿಂಗ್ಲೆ, ಕೈರ್ನ್ಸ್‌ನ ಉತ್ತರಕ್ಕೆ 40ಕಿಮೀ ದೂರದಲ್ಲಿರುವ ವಾಂಗೆಟ್ಟಿ ಬೀಚ್ ನಲ್ಲಿ ತನ್ನ ನಾಯಿಯೊಂದಿಗೆ ನಡೆದು ಹೋಗುತ್ತಿದ್ದಾಗ ಹತ್ಯೆಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಗುರುವಾರ ವರದಿ ಮಾಡಿದೆ.

ಇನ್ನಿಸ್ಫೇಲ್ ನಲ್ಲಿ ನರ್ಸ್ ಆಗಿದ್ದ ಭಾರತದ ರಾಜ್ ವಿಂದರ್ ಸಿಂಗ್ ಈ ಪ್ರಕರಣದ ಪ್ರಮುಖ ವ್ಯಕ್ತಿ ಎನ್ನಲಾಗಿದೆ. ಆದರೆ, ಈತ ಕಾರ್ಡಿಂಗ್ಲೆ ಹತ್ಯೆಯ ಎರಡು ದಿನಗಳ ನಂತರ ಆಸ್ಟ್ರೇಲಿಯಾದಲ್ಲಿನ ಕೆಲಸ, ಪತ್ನಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಭಾರತಕ್ಕೆ ಪಲಾಯನವಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಇದೀಗ ಆತನಿಗಾಗಿ ಹುಡುಕಾಟ ನಡೆಸುತ್ತಿರುವ ಕ್ವಿನ್ಸ್ ಲ್ಯಾಂಡ್ ಪೊಲೀಸರು ಆರೋಪಿಯ ಸುಳಿವು ನೀಡಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ಪ್ರಕಟಿಸಿದ್ದಾರೆ.

SCROLL FOR NEXT