ಬೀಜಿಂಗ್‌ನಲ್ಲಿ ಕೊರೊನಾವೈರಸ್ ಸೋಂಕು ಪರೀಕ್ಷೆಗಾಗಿ ಮಾಸ್ಕ್ ಧರಿಸಿ ಸರದಿಯಲ್ಲಿ ನಿಂತಿರುವ ಜನ (ಚಿತ್ರ-ಎಪಿ) 
ವಿದೇಶ

ಕಠಿಣ ನಿರ್ಬಂಧಗಳ ಹೊರತಾಗಿಯೂ ಚೀನಾದಲ್ಲಿ ಆರು ತಿಂಗಳ ಬಳಿಕ ಕೋವಿಡ್‌ನಿಂದ ಮೊದಲ ಸಾವು

ಕೋವಿಡ್ ವಿರುದ್ಧ ಬೀಜಿಂಗ್ ಮತ್ತು ದೇಶದಾದ್ಯಂತ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕೋವಿಡ್-19 ನಿಂದಾಗಿ ಮೊದಲ ಸಾವು ಪ್ರಕರಣ ವರದಿಯಾಗಿದೆ.

ಬೀಜಿಂಗ್: ಕೋವಿಡ್ ವಿರುದ್ಧ ಬೀಜಿಂಗ್ ಮತ್ತು ದೇಶದಾದ್ಯಂತ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕೋವಿಡ್-19 ನಿಂದಾಗಿ ಮೊದಲ ಸಾವು ಪ್ರಕರಣ ವರದಿಯಾಗಿದೆ.

ಮೇ 26 ರಿಂದೀಚೆಗೆ ಇದೇ ಮೊದಲು 87 ವರ್ಷದ ಬೀಜಿಂಗ್ ವ್ಯಕ್ತಿ ಸಾವಿಗೀಡಾಗಿರುವುದಾಗಿ ವರದಿಯಾಗಿದ್ದು, ಈ ಮೂಲಕ ಒಟ್ಟು ಮೃತರ ಸಂಖ್ಯೆ 5,227 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಈ ಹಿಂದೆ ಶಾಂಘೈನಲ್ಲಿ ಸಾವಿನ ಪ್ರಕರಣ ವರದಿಯಾಗಿತ್ತು. ಚೀನಾದಲ್ಲಿ ಈವರೆಗೆ ಶೇ 92ಕ್ಕಿಂತ ಅಧಿಕ ಜನರು ಲಸಿಕೆಯನ್ನು ಪಡೆದಿದ್ದರೂ, ವಯಸ್ಸಾದವರಲ್ಲಿ ವಿಶೇಷವಾಗಿ 80 ವರ್ಷಕ್ಕಿಂತ ಮೇಲ್ಪಟ್ಟವರೇ ಬಹುಪಾಲು ಇನ್ನೂ ಲಸಿಕೆ ಪಡೆದಿಲ್ಲ.

ಈಗ ಮೃತಪಟ್ಟಿರುವವರ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ ಆಯೋಗವು ಯಾವುದೇ ವಿವರಗಳನ್ನು ನೀಡಿಲ್ಲ.
ಇದೇ ಕಾರಣಕ್ಕಾಗಿಯೇ ಚೀನಾ ಹೆಚ್ಚಾಗಿ ತನ್ನ ಗಡಿಗಳನ್ನು ಮುಚ್ಚಿದೆ ಎಂದು ಪರಿಗಣಿಸಲಾಗಿದೆ ಮತ್ತು ಲಾಕ್‌ಡೌನ್‌ಗಳು, ಕ್ವಾರಂಟೈನ್‌ಗಳು, ಪ್ರಕರಣ ಟ್ರೇಸಿಂಗ್ ಮತ್ತು ಸಾಮೂಹಿಕ ಪರೀಕ್ಷೆಗಳ ಮೂಲಕ ಸೋಂಕನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಇದು ಸಾಮಾನ್ಯ ಜನಜೀವನ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ.

ಝೆಂಗ್‌ಝೌ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ 4 ತಿಂಗಳ ಮಗು ವಾಂತಿ ಮತ್ತು ಭೇದಿಯಿಂದ ಬಳಲುತ್ತಿತ್ತು. ಆರೋಗ್ಯ ಕಾರ್ಯಕರ್ತರು ನೆರವು ನೀಡಲು ನಿರಾಕರಿಸಿದ ನಂತರ ಆಕೆಯ ತಂದೆ ಇತರೆ ಸಹಾಯ ಪಡೆಯಲು 11 ಗಂಟೆ ಕಾಯಬೇಕಾಯಿತು ಮತ್ತು ಅಂತಿಮವಾಗಿ ಆಕೆಯನ್ನು 100 ಕಿಲೋಮೀಟರ್ (60 ಮೈಲುಗಳು) ದೂರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಶೂನ್ಯ ಕೋವಿಡ್ ನೀತಿಯಿಂದಾಗಿ ಇಂಟರ್ನೆಟ್ ಬಳಕೆದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಸಹಾಯ ಮಾಡಲು ವಿಫಲರಾದ ಝೆಂಗ್‌ಝೌ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!