ವಿದೇಶ

ಉಕ್ರೇನ್‌ನ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ರಾಕೆಟ್ ದಾಳಿ; ನವಜಾತ ಶಿಶು ಸಾವು

Ramyashree GN

ಕೀವ್: ದಕ್ಷಿಣ ಉಕ್ರೇನ್‌ನಲ್ಲಿ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ರಾತ್ರಿ ರಾಕೆಟ್ ದಾಳಿ ಸಂಭವಿಸಿದ್ದು, ನವಜಾತ ಶಿಶು ಮೃತಪಟ್ಟಿದೆ ಎಂದು ಉಕ್ರೇನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಗುವಿನ ತಾಯಿ ಮತ್ತು ವೈದ್ಯರನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರಾಕೆಟ್‌ಗಳು ರಷ್ಯಾದವು ಎಂದು ಪ್ರದೇಶದ ಗವರ್ನರ್ ಹೇಳಿದ್ದಾರೆ.

ಕಳೆದ 10 ತಿಂಗಳಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದು ಝಪೋರಿಝಿಯಾ ನಗರಕ್ಕೆ ಸಮೀಪವಿರುವ ವಿಲ್ನಿಯನ್‌ಸ್ಕ್‌ನಲ್ಲಿ ದಾಳಿಯಿಂದಾಗಿ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳಲ್ಲಿನ ರೋಗಿಗಳು ಮತ್ತು ಸಿಬ್ಬಂದಿಗಳಿಗೆ ನೋವುಂಟು ಮಾಡುತ್ತಿದೆ.

ಅವರು ಆರಂಭದಿಂದಲೂ ಫೈರಿಂಗ್ ಮಾಡುತ್ತಲೇ ಇದ್ದು, ಮಾರ್ಚ್ 9 ರಂದು ನಡೆಸಿದ ವಾಯುದಾಳಿಯು ರಷ್ಯಾ ಈಗ ಆಕ್ರಮಿಸಿರುವ ಬಂದರು ನಗರವಾದ ಮರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆಯನ್ನು ನಾಶಪಡಿಸಿತು.

ರಾತ್ರಿಯಲ್ಲಿ, ರಷ್ಯಾದ ಸೈನಿಕರು ವಿಲ್ನಿಯನ್ಸ್ಕ್‌ನಲ್ಲಿರುವ ಆಸ್ಪತ್ರೆಯ ಸಣ್ಣ ಹೆರಿಗೆ ವಾರ್ಡ್‌ನೊಳಗೆ ಬೃಹತ್ ರಾಕೆಟ್‌ಗಳನ್ನು ಉಡಾಯಿಸಿದ್ದಾರೆ. ದಾಳಿಯಲ್ಲಿ ಎರಡು ದಿನದಿಂದೆ ಜಗತ್ತನ್ನು ನೋಡಿದ್ದ ನವಜಾತ ಶಿಶು ಸಾವಿಗೀಡಾಗಿದೆ. ಈ ದುಃಖವು ನಮ್ಮ ಹೃದಯವನ್ನು ಆವರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದಾಳಿಯಿಂದ ಎರಡು ಅಂತಸ್ತಿನ ಕಟ್ಟಡ ನಾಶವಾಗಿದೆ ಎಂದು ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಸ್ಟಾರುಖ್ ತಿಳಿಸಿದ್ದಾರೆ.

ಅವರು ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ದಟ್ಟವಾದ ಹೊಗೆಯು ಕಲ್ಲುಮಣ್ಣುಗಳ ದಿಬ್ಬಗಳ ಮೇಲೆ ಏರುತ್ತಿರುವುದನ್ನು ತೋರಿಸಿವೆ. ದಾಳಿ ನಡೆದ ವೇಳೆ ವೈದ್ಯರು ಮತ್ತು ಮಗುವಿನ ತಾಯಿ ಮಾತ್ರ ವಾರ್ಡ್‌ನಲ್ಲಿದ್ದರು ಎಂದು ಹೇಳಿದರು.

SCROLL FOR NEXT