ವಿದೇಶ

ಮಂಕಿಪಾಕ್ಸ್ ಅನ್ನು ಇನ್ಮುಂದೆ ಆ ಹೆಸರಿನಿಂದ ಕರೆಯುವಂತಿಲ್ಲ: ಹೊಸ ಹೆಸರು ನೀಡಿದ ಡಬ್ಲ್ಯುಹೆಚ್ಒ!

Srinivas Rao BV

ಲಂಡನ್: ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಗೆ ಹೊಸ ಹೆಸರನ್ನು ನೀಡಿದ್ದು, ಇನ್ನು ಮುಂದೆ ಆ ಹೆಸರಿನಿಂದ ರೋಗವನ್ನು ಉಲ್ಲೇಖಿಸುವಂತಿಲ್ಲ ಎಂದು ಹೇಳಿದೆ. 

ಮಂಕಿಪಾಕ್ಸ್ ಎಂಬುದು ತಾರತಮ್ಯ ಮತ್ತು ಜನಾಂಗೀಯ ಅಂಶವಾಗುತ್ತದೆ ಎಂಬ ಅಭಿಪ್ರಾಯ ಡಬ್ಲ್ಯುಹೆಚ್ ಒದ್ದಾಗಿದ್ದು, ಮಂಕಿಪಾಕ್ಸ್ ರೋಗಕ್ಕೆ ಎಂ-ಪಾಕ್ಸ್ ಎಂಬ ಹೊಸ ಹೆಸರು ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಹಳೆಯ ಹೆಸರನ್ನು ಉಲ್ಲೇಖಿಸುವಂತಿಲ್ಲ ಎಂದು ಹೇಳಿದೆ. 

ಎಂಪಾಕ್ಸ್ ಸೋಂಕು 100 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಹಲವು ರಾಷ್ಟ್ರಗಳು ಹಾಗೂ ವ್ಯಕ್ತಿಗಳಿಂದ ಈ ಸೋಂಕಿನ ಹೆಸರನ್ನು ಬದಲಾವಣೆ ಮಾಡುವಂತೆ ಮನವಿ ಬಂದಿತ್ತು ಎಂದು ಡಬ್ಲ್ಯುಹೆಚ್ಒ ಹೇಳಿದೆ.
 
ಈ ಸೋಂಕಿಗೆ ಮರುನಾಮಕರಣ ಮಾಡುವ ಬಗ್ಗೆ ಡಬ್ಲ್ಯುಹೆಚ್ಒ ಆಗಸ್ಟ್ ತಿಂಗಳಲ್ಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು. 

ಈ ವರೆಗೂ 80,000 ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಪತ್ತೆಯಾಗಿದೆ. ಆಫ್ರಿಕಾದ ಹೊರ ಪ್ರದೇಶದಲ್ಲಿ ಗೇ, ದ್ವಿಲಿಂಗಿ ಅಥವಾ ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿರುವ ಇತರ ಪುರುಷರಲ್ಲಿ ಕಂಡುಬಂದಿತ್ತು. 

ಬೆಲ್ಜಿಯಂ ಮತ್ತು ಸ್ಪೇನ್‌ನಲ್ಲಿನ ಎರಡು ರೇವ್‌ಗಳಲ್ಲಿ ಲೈಂಗಿಕತೆಯ ಮೂಲಕ ಹರಡಿದ ನಂತರ ಪಾಶ್ಚಿಮಾತ್ಯ ದೇಶಗಳಲ್ಲಿ ಮಂಕಿಪಾಕ್ಸ್ ಏಕಾಏಕಿ ಹರಡಿತು ಎಂದು ವಿಜ್ಞಾನಿಗಳು ನಂಬಿದ್ದಾರೆ.

SCROLL FOR NEXT