ಹೂಡಿಕೆಗಾಗಿ ಅದಾನಿಗೆ ಕೋಸ್ಟ ರಿಕಾದಿಂದ ಆಹ್ವಾನ; ಮಧ್ಯ ಅಮೇರಿಕನ್ ಪ್ರದೇಶಕ್ಕೂ ವಿಸ್ತರಿಸುತ್ತಾ ಅದಾನಿ ಉದ್ಯಮ?
ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ.
ನವದೆಹಲಿ: ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ.
ಈ ಯೋಜನೆಯಲ್ಲಿ ಅದಾನಿ ಸಮೂಹ ಆಸಕ್ತಿ ತೋರಿದ್ದು, ಇದರಲ್ಲಿ ಎರಡು-ಒಂದು ಅಟಾಂಟಿಕ್ ನಲ್ಲಿ ಹಾಗೂ ಮತ್ತೊಂದು ಪೆಸಿಫಿಕ್ ನಲ್ಲಿ ಬಂದರುಗಳ ನಿರ್ಮಾಣವೂ ಒಳಗೊಂಡಿದೆ. ಬಂದರುಗಳಿಗೆ 315 ಕಿ.ಮೀ ವರೆಗೆ ರೈಲು ಹಗೂ ಹೆದ್ದಾರಿಯ ಮೂಲಕ ಸರಕು ಸಾಗಣೆಗಾಗಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಭಾರತಕ್ಕೆ ಕೋಸ್ಟಾ ರಿಕಾದ ರಾಯಭಾರಿ ಕ್ಲಾಡಿಯೋ ಅನ್ಸೊರೆನಾ ಹೇಳಿದ್ದಾರೆ.
ಈ ಯೋಜನೆ ಪೂರ್ಣಗೊಂಡಲ್ಲಿ ಒಂದು ಕಂಟೇನರ್ ನ್ನು ಸಾಗರದಲ್ಲಿ ಅನ್ಲೋಡ್ ಮಾಡಿ ಮತ್ತೊಂದು ಸಾಗರ ಪ್ರದೇಶಕ್ಕೆ ರಸ್ತೆ ಅಥವಾ ರೈಲು ಮೂಲಕ 54 ಗಂಟೆಗಳಲ್ಲಿ ಸಾಗಣೆ ಮಾಡಬಹುದಾಗಿದೆ. ಈ ಯೋಜನೆಯ ಮೂಲಕ ಹೆಚ್ಚು ದಟ್ಟಣೆ ಇರುವ ಪನಾಮ ಕಾಲುವೆ ಮಾರ್ಗದಲ್ಲಿ ಹಡಗುಗಳು ಮುಂದೆ ಸಾಗಲು ಗಂಟೆ ಗಟ್ಟಲೆ ಕಾಯುವುದನ್ನು ತಡೆಯಬಹುದಾಗಿದೆ. ಈ ಡ್ರೈ ಕಾನಲ್ ಯೋಜನೆಯಿಂದ ಪರಿಸರದ ಮೇಲೆ ಅತ್ಯಂತ ಕನಿಷ್ಠ ಪರಿಣಾಮ ಉಂಟಾಗಲಿದೆ ಎಂದು ಕೋಸ್ಟಾ ರಿಕಾ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.