ವಿದೇಶ

ಹಾಂಗ್ ಕಾಂಗ್: ಹರಾಜು ದಾಖಲೆಗಳನ್ನು ಮುರಿದ ಗುಲಾಬಿ ಬಣ್ಣದ ವಜ್ರ! 

Srinivas Rao BV

ನವದೆಹಲಿ: ಹಾಂಗ್ ಕಾಂಗ್ ನಲ್ಲಿ ಗುಲಾಬಿ ಬಣ್ಣದ ವಜ್ರಗಳು ಹರಾಜು ದಾಖಲೆಗಳನ್ನು ಮುರಿದಿದೆ. 

49.9 ಮಿಲಿಯನ್ ಡಾಲರ್ ಗೆ ಗುಲಾಬಿ ಬಣ್ಣದ ವಜ್ರಗಳು ಹರಾಜಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಕ್ಯಾರೆಟ್ ಗೆ ಅತಿ ಹೆಚ್ಚು ಬೆಲೆಗೆ ಹರಾಜಾಗಿರುವ ವಜ್ರ ಇದಾಗಿದೆ.

11.15 ಕ್ಯಾರೆಟ್ ವಿಲಿಯಮ್ಸನ್ ಪಿಂಕ್ ಸ್ಟಾರ್ ಡೈಮಂಡ್, ಹಾಂಗ್ ಕಾಂಗ್ ನ ಸೋಥೆಬೈ ನಲ್ಲಿ ಹರಾಜಾಗಿದ್ದು, 392 ಮಿಲಿಯನ್ ಡಾಲರ್ (49.9 ಮಿಲಿಯನ್ ಡಾಲರ್)  ಗೆ ಹರಾಜಾಗಿದೆ. 

ಮೂಲತಃ ಈ ವಜ್ರ 21 ಮಿಲಿಯನ್ ಡಾಲರ್ ಮೌಲ್ಯಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿತ್ತು.  ಈ ವಿಲಿಯಮ್ಸನ್ ಪಿಂಕ್ ಸ್ಟಾರ್ ಡೈಮಂಡ್ ಗೆ ಎರಡು ಪಿಂಕ್ ಡೈಮಂಡ್ ಗಳ ಇತಿಹಾಸವಿದೆ.  ಮೊದಲನೆಯದ್ದು 23.60 ಕ್ಯಾರಟ್ ವಿಲಿಯಮ್ಸನ್ ವಜ್ರವನ್ನು ರಾಣಿ ಎಲಿಜಬೆತ್-II ಗೆ 1947 ರಲ್ಲಿ ಅವರ ವಿವಾಹದಲ್ಲಿ ಉಡುಗೊರೆಯನ್ನಾಗಿ ನೀಡಲಾಗಿತ್ತು. ಎರಡನೆಯದ್ದು 59.60 ಕ್ಯಾರೆಟ್ ಪಿಂಕ್ ಸ್ಟಾರ್ ವಜ್ರವನ್ನು 2017 ರಲ್ಲಿ 71.2 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಲಾಗಿತ್ತು. 

SCROLL FOR NEXT