ಉಕ್ರೇನ್‌ನ ಜಪೋರಿಝಿಯಾ ನಗರದ ಮೇಲೆ ರಷ್ಯಾದ ಕ್ಷಿಪಣಿ ದಾಳಿಯಿಂದ ಕಟ್ಟಡಗಳಿಗೆ ಹಾನಿ, ರಕ್ಷಣಾ ಕಾರ್ಯಾಚರಣೆ 
ವಿದೇಶ

ಉಕ್ರೇನ್‌ನ ಜಪೋರಿಝಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ 17 ಮಂದಿ ಸಾವು

ಜಪೋರಿಝಿಯಾ ಇತ್ತೀಚಿನ ವಾರಗಳಲ್ಲಿ ಪದೇ ಪದೇ ದಾಳಿಗೆ ತುತ್ತಾಗಿದೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ವಾರ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಸ್ವಾಧೀನಪಡಿಸಿಕೊಂಡ ಉಕ್ರೇನ್ ನಿಯಂತ್ರಿತ ಭಾಗದಲ್ಲಿದ್ದ ಪ್ರದೇಶ ಇದಾಗಿದೆ.

ಕೀವ್: ಜಪೋರಿಝಿಯಾ ಮೇಲೆ ರಷ್ಯಾ ರಾತ್ರಿಯಿಡೀ ನಡೆಸಿದ ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ನಗರದ ಉನ್ನತ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

'ರಾತ್ರಿಯಿಡೀ ನಗರದ ಮೇಲೆ ರಾಕೆಟ್‌ ದಾಳಿ ನಡೆಸಿದರು. ಇದರಿಂದ ಕನಿಷ್ಠ ಐದು ಮನೆಗಳು ನಾಶವಾದವು ಮತ್ತು ಸುಮಾರು 40 ಹಾನಿಗೊಳಗಾಗಿವೆ. ಉಕ್ರೇನ್ ಸೇನೆ ಕೂಡ ರಷ್ಯಾದ ದಾಳಿಯನ್ನು ದೃಢಪಡಿಸಿದ್ದು, 12ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ನಗರ ಸಭೆಯ ಕಾರ್ಯದರ್ಶಿ ಅನಾಟೊಲಿ ಕುರ್ಟೆವ್ ತಿಳಿಸಿದ್ದಾರೆ.

ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್‌ ಬಾಂಬ್‌ ಸ್ಫೋಟಗೊಂಡ ಪರಿಣಾಮ ಸೇತುವೆಯ ಭಾಗವೊಂದು ಕುಸಿದಿದ್ದು, ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದಾದ ಬಳಿಕ ಉಕ್ರೇನ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ.

ಜಪೋರಿಝಿಯಾ ಇತ್ತೀಚಿನ ವಾರಗಳಲ್ಲಿ ಪದೇ ಪದೇ ದಾಳಿಗೆ ತುತ್ತಾಗಿದೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ವಾರ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಸ್ವಾಧೀನಪಡಿಸಿಕೊಂಡ ಉಕ್ರೇನ್ ನಿಯಂತ್ರಿತ ಭಾಗದಲ್ಲಿದ್ದ ಪ್ರದೇಶ ಇದಾಗಿದೆ.

ಸದ್ಯ ರಷ್ಯಾದ ನಿಯಂತ್ರಣಕ್ಕೆ ಒಳಪಟ್ಟಿರುವ ಜಪೋರಿಝಿಯಾವು ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ನೆಲೆಯಾಗಿದೆ. ಈ ನಗರವು ಪದೇ ಪದೇ ಶೆಲ್ ದಾಳಿಗೆ ಒಳಗಾಗಿದ್ದು, ಬಾಹ್ಯ ಶಕ್ತಿಯ ಮೂಲವನ್ನು ಕಳೆದುಕೊಂಡಿದೆ. ಇದೀಗ ತುರ್ತು ಡೀಸೆಲ್ ಜನರೇಟರ್‌ಗಳನ್ನು ಅವಲಂಬಿಸಿದೆ ಎಂದು ಯುಎನ್ ಪರಮಾಣು ವಾಚ್‌ಡಾಗ್ ಶನಿವಾರ ಹೇಳಿದೆ.

ಕ್ರಿಮಿಯಾ ಸೇತುವೆಯ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ, ಇದು ರಷ್ಯಾಕ್ಕೆ ಗಮನಾರ್ಹ ಹೊಡೆತವಾಗಿದೆ ಮತ್ತು ಸಂಘರ್ಷದ ಉಲ್ಬಣಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನ ಈ ಸ್ಫೋಟ ನಡೆದಿದೆ. ಪುಟಿನ್‌ ಅವರನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ.

ಕಪ್ಪುಸಮುದ್ರ ಮತ್ತು ಅಜೋವ್‌ ಸಮುದ್ರವನ್ನು ಸಂಪರ್ಕಿಸುವ ಕೆರ್ಚ್‌ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. 3.6 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ, ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT