ವಿದೇಶ

ವೆನೆಜುವೆಲಾದಲ್ಲಿ ಮಳೆಗೆ ಭೂಕುಸಿತ: 22 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿ ಕಣ್ಮರೆ

Sumana Upadhyaya

ಲಾಸ್ ತೆಜೇರಿಯಾಸ್(ವೆನೆಜುವೆಲಾ): ಮಧ್ಯ ವೆನೆಜುವೆಲಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ. ನದಿಯೊಂದು ಉಕ್ಕಿ ಹರಿದ ನಂತರ 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. 

ಹೆಚ್ಚಿನ ಮಳೆಯ ಪರಿಣಾಮವಾಗಿ ಬಿಕ್ಕಟ್ಟು-ಪೀಡಿತ ದಕ್ಷಿಣ ಅಮೆರಿಕಾ ರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಹತ್ತಾರು ಜನರು ಮೃತಪಟ್ಟಿದ್ದರು. ಇಲ್ಲಿ ಸಾಕಷ್ಟು ಸಾವು-ನೋವು ಉಂಟಾಗಿದೆ. 22 ಜನರು ಮೃತಪಟ್ಟಿದ್ದಾರೆ. 52 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್ ಲಾಸ್ ಟೆಜೆರಿಯಾಸ್ ಪಟ್ಟಣದ ಸ್ಥಿತಿಗತಿ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಮನೆಗಳು, ಹತ್ತಾರು ವ್ಯಾಪಾರಿ ಅಂಗಡಿಗಳು, ಮಳಿಗೆಗಳು ನಾಶವಾಗಿವೆ. ಪಟ್ಟಣದ ಬೀದಿಬೀದಿಗಳಲ್ಲಿ ಕಸಕಡ್ಡಿಗಳು, ಕಟ್ಟಿಗೆಗಳು ಬಿದ್ದಿವೆ. ಕೆಸರು ತುಂಬಿಕೊಂಡಿವೆ. ಒಡೆದ ಮರ, ಗೃಹೋಪಯೋಗಿ ವಸ್ತುಗಳು ಮತ್ತು ಮ್ಯಾಂಗಲ್ಡ್ ಕಾರುಗಳು ಸೇರಿದಂತೆ ಹಲವು ವಸ್ತುಗಳು ರಸ್ತೆಯಲ್ಲಿ, ರಸ್ತೆಬದಿಗಳಲ್ಲಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. 

ಲಾಸ್ ಟೆಜೆರಿಯಾಸ್ ಗ್ರಾಮದಲ್ಲಿ ಸಾಕಷ್ಟು ಹಾನಿಯುಂಟಾಗಿದೆ. ರಾಜ್ಯದ ರಾಜಧಾನಿ ಕ್ಯಾರಕಾಸ್‌ನಿಂದ 50 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿರುವ ಪಟ್ಟಣ ಕಣ್ಮರೆಯಾದಂತಾಗಿದೆ. ಸುಮಾರು ಒಂದು ಸಾವಿರ ಜನರು ರಕ್ಷಣಾ ಪ್ರಯತ್ನಗಳಲ್ಲಿ ಸೇರಿಕೊಂಡಿದ್ದಾರೆ ಎಂದು ಆಂತರಿಕ ಮತ್ತು ನ್ಯಾಯ ಸಚಿವ ರೆಮಿಜಿಯೊ ಸೆಬಾಲ್ಲೋಸ್ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

SCROLL FOR NEXT