ವಿಶ್ವಸಂಸ್ಥೆ ಸಾಮಾನ್ಯಸಭೆ 
ವಿದೇಶ

ಉಕ್ರೇನ್‌ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನ: ರಷ್ಯಾದ ಬೇಡಿಕೆ ತಿರಸ್ಕರಿಸಿದ ಭಾರತ

ಉಕ್ರೇನ್‌ ಮೇಲಿನ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನಕ್ಕೆ ರಷ್ಯಾ ಮಾಡಿದ್ದ ಮನವಿಯನ್ನು ಭಾರತ ತಿರಸ್ಕರಿಸಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ದವಾಗಿ ಭಾರತ ಮತ ಚಲಾಯಿಸಿದೆ.

ನವದೆಹಲಿ: ಉಕ್ರೇನ್‌ ಮೇಲಿನ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನಕ್ಕೆ ರಷ್ಯಾ ಮಾಡಿದ್ದ ಮನವಿಯನ್ನು ಭಾರತ ತಿರಸ್ಕರಿಸಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ದವಾಗಿ ಭಾರತ ಮತ ಚಲಾಯಿಸಿದೆ.

ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಮಾಸ್ಕೋ "ಅಕ್ರಮ ಸ್ವಾಧೀನ" ವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಹಸ್ಯ ಮತದಾನವನ್ನು ಕೈಗೊಳ್ಳಲು ರಷ್ಯಾ ಬೇಡಿಕೆ ಇಟ್ಟಿತ್ತು. ಅಲ್ಲದೆ ಈ ಕುರಿತ ತನ್ನ ಬೇಡಿಕೆಗೆ ಭಾರತ ಸ್ಪಂದಿಸುವ ಆಶಯಹೊಂದಿತ್ತು. ಆದರೆ ಸಭೆಯಲ್ಲಿ ರಷ್ಯಾ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ದವಾಗಿ ಭಾರತ ಸೋಮವಾರ ಮತ ಚಲಾಯಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಭಾರತವು ಇತರ 106 ದೇಶಗಳೊಂದಿಗೆ ಗುಪ್ತ ಮತದಾನ ನಡೆಸಬೇಕೆಂಬ ರಷ್ಯಾದ ಬೇಡಿಕೆಯನ್ನು ವಿರೋಧಿಸಿ ಮತದಾನ ಮಾಡಿದೆ. ರಹಸ್ಯ ಮತದಾನವನ್ನು ನಡೆಸಲು ರಷ್ಯಾ ನೀಡಿದ ಕರೆಯ ಪರವಾಗಿ ಹದಿಮೂರು ದೇಶಗಳು ಮತ ಚಲಾಯಿಸಿದವು. ರಷ್ಯಾ ಹಾಗೂ ಚೀನಾ ಸೇರಿದಂತೆ ಇನ್ನೂ 39 ದೇಶಗಳು ಮತದಾನದಿಂದ ದೂರ ಉಳಿದಿವೆ. ಉಕ್ರೇನ್‌ನ ನಾಲ್ಕು ಪ್ರದೇಶಗಳ 'ಅಕ್ರಮ ಸ್ವಾಧೀನ'ವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ಮಾಸ್ಕೋ ರಹಸ್ಯ ಮತದಾನವನ್ನು ಕೋರಿತ್ತು.

ಉಕ್ರೇನಿಯನ್ ಪ್ರಾಂತ್ಯಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಯ ನಂತರ ರಷ್ಯಾದಲ್ಲಿ ಈ ವಾರದ ನಂತರ ಯುಎನ್‌ಜಿಎಯಲ್ಲಿ ಸಾರ್ವಜನಿಕ ಮತವನ್ನು ನಡೆಸಲಾಗುವುದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.

ರಷ್ಯಾಗೆ ಮುಖಭಂಗ, ಚೀನಾ ಸಾಥ್
ಇನ್ನು ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ರಷ್ಯಾದ ಬೇಡಿಕೆಯ ಕ್ರಮದ ಮೇಲೆ ಕಾರ್ಯವಿಧಾನದ ಮತದೊಂದಿಗೆ ಸಭೆ ಪ್ರಾರಂಭವಾಯಿತು. ಚರ್ಚೆಯಾಗುತ್ತಿರುವ ಉಕ್ರೇನಿಯನ್ ಕರಡು ನಿರ್ಣಯವನ್ನು ಸಾರ್ವಜನಿಕ ಮತದಾನದ ಮೂಲಕ ಅಲ್ಲ ಬದಲಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸಬೇಕು ಎಂದು ರಷ್ಯಾ ಪ್ರತಿನಿಧಿಗಳು ಪ್ರಸ್ತಾಪಿಸಿದರು. ಉಕ್ರೇನ್ ಮೇಲಿನ ನಿರ್ಣಯದ ಮೇಲೆ ರಷ್ಯಾ ರಹಸ್ಯ ಮತದಾನವನ್ನು ಪ್ರಸ್ತಾಪಿಸಿದ ನಂತರ ಅಲ್ಬೇನಿಯಾ ಮುಕ್ತ-ಬಹಿರಂಗ ಮತದಾನ ಕೋರಿತು. ಅಲ್ಬೇನಿಯನ್ ರಾಜತಾಂತ್ರಿಕರು ಪ್ರಸ್ತಾವನೆಯನ್ನು ವಜಾಗೊಳಿಸುವಾಗ "ರಹಸ್ಯ ಮತದಾನವನ್ನು ನಡೆಸುವುದು ಅಸೆಂಬ್ಲಿಯ ಅಭ್ಯಾಸಗಳನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿತು. ಅಲ್ಬೇನಿಯಾ ಕರೆದ ಕಾರ್ಯವಿಧಾನದ ಮತದ ಪರವಾಗಿ ಭಾರತ ಮತ ಹಾಕಿತು.

ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸುವ ನಿರ್ಣಯವು UNGA ಯಲ್ಲಿ ಅಂಗೀಕಾರಕ್ಕೆ ಸಿದ್ಧವಾಗಿದ್ದು, ಅಲ್ಲಿ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸುತಿವೆ ಮತ್ತು ಯಾರೂ ವೀಟೋವನ್ನು ಹೊಂದಿಲ್ಲ. ಅಲ್ಬೇನಿಯಾದ ಪ್ರಸ್ತಾವನೆಯು ಪರವಾಗಿ 107 ಮತಗಳನ್ನು ಪಡೆದಿದ್ದು, 13 ದೇಶಗಳು ಮುಕ್ತ ಮತ್ತು ಬಹಿರಂಗ ಮತದಾನವನ್ನು ವಿರೋಧಿಸಿದವು. ಅಂತೆಯೇ 39 ರಾಷ್ಟ್ರಗಳ ಪ್ರತಿನಿಧಿಗಳು ಗೈರುಹಾಜರಾಗಿದ್ದರು. ಚೀನಾ, ಇರಾನ್ ಮತ್ತು ರಷ್ಯಾ ಸೇರಿದಂತೆ 24 ದೇಶಗಳು ಮತದಾನದಿಂದ ದೂರ ಉಳಿದವು. 

ರಷ್ಯಾ ಭಯೋತ್ಪಾದಕ ರಾಷ್ಟ್ರ: ಉಕ್ರೇನ್ ತೀವ್ರ ಕಿಡಿ
ಇನ್ನು ತನ್ನ ದೇಶದ ಮೇಲೆ ಸರಣಿ ಕ್ಷಿಪಣಿ ದಾಳಿ ನಡೆಸಿದ ರಷ್ಯಾವನ್ನು ಉಕ್ರೇನ್ ರಾಯಭಾರಿ ಸೆರ್ಗಿ ಕಿಸ್ಲಿಟ್ಸಿ ಅವರು ಭಯೋತ್ಪಾದಕ ರಾಷ್ಟ್ರ ಎಂದು ಕಿಡಿಕಾರಿದರು. ರಷ್ಯಾದ ಆಕ್ರಮಣಕ್ಕೆ ನೂರಾರು ಮಂದಿ ಈಗಾಗಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಸೇರಿದಂತೆ ಉಕ್ರೇನಿಯನ್ ನಗರಗಳ ಮೇಲೆ ಸೋಮವಾರದ ಬಹು ಕ್ಷಿಪಣಿ ದಾಳಿಯ ಸಮಯದಲ್ಲಿ ಸುಮಾರು 84 ಕ್ಷಿಪಣಿಗಳು ಮತ್ತು ಸುಮಾರು ಎರಡು ಡಜನ್ ಡ್ರೋನ್‌ಗಳು ಉದ್ದೇಶಪೂರ್ವಕವಾಗಿ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿವೆ. ಇಡೀ ಜಗತ್ತು ಮತ್ತೊಮ್ಮೆ, ನಮ್ಮ ಜನರನ್ನು ಕೊಲ್ಲುವ ಭಯೋತ್ಪಾದಕ ರಾಷ್ಟ್ರದ ನಿಜವಾದ ಮುಖವನ್ನು ನೋಡಿದೆ. ಯುದ್ಧಭೂಮಿಯಲ್ಲಿ ಸೋಲುಗಳನ್ನು ಅನುಭವಿಸುತ್ತಿರುವ ರಷ್ಯಾ, ಉಕ್ರೇನಿಯನ್ ನಗರಗಳ ಶಾಂತಿಯುತ ನಿವಾಸಿಗಳ ಮೇಲೆ ಸೇಡು ತೀರಿಸುಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಕರಡು ನಿರ್ಣಯಕ್ಕೆ ಮತದಾನ ಮಾಡುವುದು "ಪ್ರತಿ ದೇಶಕ್ಕೆ, ನಮ್ಮ ಪ್ರತಿಯೊಬ್ಬ ನಾಗರಿಕರಿಗೆ, ನಿಮ್ಮ ಕುಟುಂಬಗಳಿಗೆ, ನಮ್ಮ ಮಕ್ಕಳ - ನ್ಯಾಯಕ್ಕಾಗಿ ಮತ" ಎಂದು ಉಕ್ರೇನಿಯನ್ ರಾಯಭಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT