ನಿರ್ಮಲಾ ಸೀತಾರಾಮನ್ 
ವಿದೇಶ

ಜಾರಿ ನಿರ್ದೇಶನಾಲಯ 'ಸಂಪೂರ್ಣವಾಗಿ ಸ್ವತಂತ್ರವಾಗಿದೆ'; ಸೇಡಿನ ಉದ್ದೇಶಕ್ಕೆ ಬಳಸಿಲ್ಲ: ನಿರ್ಮಲಾ ಸೀತಾರಾಮನ್

ಜಾರಿ ನಿರ್ದೇಶನಾಲಯವು 'ಸಂಪೂರ್ಣವಾಗಿ ಸ್ವತಂತ್ರವಾಗಿದೆ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ರಾಜಕೀಯ ಅಥವಾ ಸೇಡಿನ ಉದ್ದೇಶಗಳಿಗಾಗಿ ಸರ್ಕಾರವು ತನಿಖಾ ಸಂಸ್ಥೆಯನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ವಾಷಿಂಗ್ಟನ್: ಜಾರಿ ನಿರ್ದೇಶನಾಲಯವು 'ಸಂಪೂರ್ಣವಾಗಿ ಸ್ವತಂತ್ರವಾಗಿದೆ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ರಾಜಕೀಯ ಅಥವಾ ಸೇಡಿನ ಉದ್ದೇಶಗಳಿಗಾಗಿ ಸರ್ಕಾರವು ತನಿಖಾ ಸಂಸ್ಥೆಯನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿದ್ದ ವಾಷಿಂಗ್ಟನ್ ಪ್ರವಾಸದ ಅಂತ್ಯದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ಕಾರ್ಪೊರೇಟ್ ವಲಯ ಮತ್ತು ನಾಗರಿಕ ಸಮಾಜಗಳಲ್ಲಿ ಯಾವುದೇ ರೀತಿಯ ಭಯವನ್ನು ಉಂಟುಮಾಡುತ್ತಿಲ್ಲ ಎಂದು ಹೇಳುವ ಮೂಲಕ ಆರೋಪಗಳನ್ನು ಅಲ್ಲಗಳೆದರು.

ತಾನು ಮಾಡುವ ಯಾವುದೇ ಕೆಲಸದಲ್ಲಿಯೂ ಇ.ಡಿ ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಇದು ಪೂರ್ವಭಾವಿ ಅಪರಾಧಗಳನ್ನು ಅನುಸರಿಸುವ ಸಂಸ್ಥೆಯಾಗಿದೆ. ಮೊದಲು ಅಪರಾಧವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಇನ್ನಾವುದೇ ಏಜೆನ್ಸಿಯು ತೆಗೆದುಕೊಂಡಿರುತ್ತದೆ. ಬಳಿಕ ಇ.ಡಿ ಪ್ರಕರಣದ ವಿಚಾರಣೆ ಕೈಗೊಳ್ಳುತ್ತದೆ ಎಂದು ಹೇಳಿದರು.

ಖಾಸಗಿ ಬಂಡವಾಳ ಮತ್ತು ನಾಗರಿಕ ಸಮಾಜಗಳ ಇತರೆ ವಿಭಾಗಗಳನ್ನು ಹಿಂಬಾಲಿಸಲು ಇಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವನ್ನು ನಿರಾಕರಿಸಿದ ಅವರು, ತನಿಖಾ ಸಂಸ್ಥೆಗಳನ್ನು ಇಂತಹ ಯಾವುದೇ ದುರುದ್ದೇಶಕ್ಕೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಡಿ ಮತ್ತು ಐಟಿಯ ಪಾತ್ರದ ಬಗ್ಗೆ ಚಿಂತಕರ ಚಾವಡಿ ಸಮುದಾಯಗಳಿಗೆ ಸ್ಪಷ್ಟಪಡಿಸಲು ಮತ್ತು ಭರವಸೆ ನೀಡಲು ನೀವು ಬಯಸುವಿರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಆದರೆ, ಇ.ಡಿ ಏನು ಮಾಡಿದರೂ ಸರಿಯಾದ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಪಡೆದ ನಂತರವೇ ಎಂದು ಸೀತಾರಾಮನ್ ಹೇಳಿದ್ದಾರೆ.

ಯಾವುದೇ ಪ್ರಕರಣದಲ್ಲಿ ಇ.ಡಿ ಮೊದಲ ನಿದರ್ಶನದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ವೈಯಕ್ತಿಕ ಪ್ರಕರಣಗಳು ಅಥವಾ ವಿಧಾನದ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ. ಆದರೆ, ನಿಸ್ಸಂಶಯವಾಗಿ ಎದ್ದುಕಾಣುವ ನಿದರ್ಶನಗಳಿವೆ. ಇ.ಡಿ ಅಲ್ಲಿಗೆ ಹೋದರೆ ಅದರ ಕೈಯಲ್ಲಿ ಕೆಲವು ಪ್ರಾಥಮಿಕ ಸಾಕ್ಷ್ಯಗಳಿವೆ ಎಂಬುದು ಸ್ಪಷ್ಟ ಎಂದು ಸೀತಾರಾಮನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT