ವಿದೇಶ

ವಿಶ್ವಸಂಸ್ಥೆಯ ಷಿನ್ಜಿಯಾಂಗ್ ವರದಿಯ ಬಗ್ಗೆ ಚೀನಾ ಕೆಂಡಾಮಂಡಲ, ವರದಿ ಹಾಸ್ಯಮಯ ಎಂದ ಡ್ರ್ಯಾಗನ್ 

Srinivas Rao BV

ಬೀಜಿಂಗ್: ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಷಿನ್ಜಿಯಾಂಗ್ ನಲ್ಲಿ ಚೀನಾ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಪ್ರಕಟಿಸಿರುವ ವರದಿಗೆ ಚೀನಾ ಕೆಂಡಾಮಂಡಲವಾಗಿದೆ. 

ವಿಶ್ವಸಂಸ್ಥೆಯ ವರದಿಯನ್ನು ಚೀನಾ, ಹಾಸ್ಯಮಯವಾದದ್ದು ಎಂದು ಹೇಳಿದ್ದು, ಚೀನಾಗೆ ಮಸಿ ಬಳಿಯುವ ಪ್ರಯತ್ನದ್ದಾಗಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 

ಯುಎನ್ ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಜೆನೀವಾದಲ್ಲಿರುವ ಚೀನಾ ಮಿಷನ್ ವಕ್ತಾರ ಲಿಯೂ ಯುಯಿನ್, ಈ ವರದಿ ಚೀನಾ ವಿರೋಧಿ ಶಕ್ತಿಗಳು ಹಾಗೂ ಪಶ್ಚಿಮದ ದೇಶಗಳು ಸಿದ್ಧಪಡಿಸಿರುವ ಹಾಸ್ಯಮಯ ಕಥೆ ಎಂದು ಹೇಳಿದ್ದಾರೆ. 

ಚೀನಾ ಉಯ್ಘರ್ ನಲ್ಲಿನ ಅಲ್ಪಸಂಖ್ಯಾತ ಜನಾಂಗದ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದೆ, ಪಶ್ಚಿಮದ ರಾಷ್ಟ್ರಗಳು ಹೈಕಮಿಷನರ್ ಹಾಗೂ ಒಹೆಚ್ ಸಿಹೆಚ್ ಆರ್ ಗೆ ಒತ್ತಡ ಹೇರುತ್ತಿದ್ದವು ಎಂದು ಚೀನಾ ಆರೋಪ ಮಾಡಿದೆ. 

ಷಿನ್ ಜಿಯಾಂಗ್ ಗೆ ಸಂಬಂಧಿಸಿದ ಮೌಲ್ಯಮಾಪನದಲ್ಲಿ ಷಿನ್ ಜಿಯಾಂಗ್ ನಲ್ಲಿರುವ ಮುಸ್ಲಿಂ ಸಮುದಾಯದ ಮೇಲೆ ಚೀನಾ ದೌರ್ಜನ್ಯ ಎಸಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು.

SCROLL FOR NEXT