ವಿದೇಶ

ಕ್ವೀನ್ ಎಲಿಜಬೆತ್ ನಿಧನ: ರಾಜನಾಗಿ ಪಟ್ಟಕ್ಕೇರುವ ಮುನ್ನ ದೇಶವನ್ನುದ್ದೇಶಿಸಿ ಕಿಂಗ್ ಚಾರ್ಲ್ಸ್ ಭಾಷಣ

Sumana Upadhyaya

ಲಂಡನ್: ಇಂಗ್ಲೆಂಡ್ ರಾಣಿ ವಯೋಸಹಜ ಖಾಯಿಲೆಯಿಂದ ತಮ್ಮ 96ನೇ ಇಳಿವಯಸ್ಸಿನಲ್ಲಿ ಗತಿಸಿದ್ದಾರೆ. ಭಾವನಾತ್ಮಕ ಸಂಬಂಧ, ಬೆಸುಗೆ ಹೊಂದಿರುವ ಇಂಗ್ಲೆಂಡಿಗರೊಂದಿಗೆ ಇಂದು ಅಂತ್ಯಕ್ರಿಯೆ ಸಂದರ್ಭದಲ್ಲಿ ಕಿಂಗ್ ಚಾರ್ಲ್ಸ್ ದೇಶದ ನಾಗರಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಿನ್ನೆ ಸ್ಕಾಟ್ ಲ್ಯಾಂಡ್ ನ ಬಲ್ಮೊರಲ್ ನಿವಾಸದಲ್ಲಿ ತಮ್ಮ ತಾಯಿ 2ನೇ ಎಲಿಜಬೆತ್ ನಿಧನ ನಂತರ 73 ವರ್ಷದ ಚಾರ್ಲ್ಸ್ ಇಂಗ್ಲೆಂಡ್ ರಾಜರಾಗಿದ್ದಾರೆ. 70 ವರ್ಷಕ್ಕೂ ಅಧಿಕ ಕಾಲ ಇಂಗ್ಲೆಂಡ್ ನ ಮಹಾರಾಣಿಯಾಗಿ ಮೆರೆದ ಎಲಿಜಬೆತ್ ಗೆ ಪ್ರಪಂಚದ ಮೂಲೆಮೂಲೆಯಿಂದ ಗೌರವ ಸಲ್ಲಿಕೆಯಾಗುತ್ತಿದೆ.

ಸ್ಕಾಟ್ ಲ್ಯಾಂಡ್ ನ ಬಲ್ಮೊರಲ್ ನಿಂದ ಇಂದು ಲಂಡನ್ ಗೆ ಹಿಂತಿರುಗಲಿರುವ ರಾಜ ಚಾರ್ಲ್ಸ್ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಇಂದು ಇಂಗ್ಲೆಂಡಿನ ನೂತನ ಪ್ರಧಾನ ಮಂತ್ರಿ ಲಿಜ್ ಟ್ರಸ್ಸ್ ಅವರೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾತನಾಡಲಿದ್ದಾರೆ.

ರಾಜನ ಪಟ್ಟಕ್ಕೇರುವ ಮುನ್ನ ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿ ಅಧಿಕಾರಿಗಳನ್ನು ಕಿಂಗ್ ಚಾರ್ಲ್ಸ್ ಭೇಟಿ ಮಾಡಲಿದ್ದಾರೆ. ಇಂದು ಶೋಕಾಚಾರಣೆ ಎಷ್ಟು ಹೊತ್ತು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ಸರ್ಕಾರ ಮಹಾರಾಣಿಯ ನಿಧನಕ್ಕೆ 10 ದಿನಗಳ ಅಧಿಕೃತ ಶೋಕಾಚರಣೆ ಮಾಡಲಿದ್ದು ಈ ಸಮಯದಲ್ಲಿ ಅತ್ಯಗತ್ಯ ಸರ್ಕಾರಿ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ. 

ರಾಜಕುಮಾರ ಚಾರ್ಲ್ಸ್ ತನ್ನ ಜೀವನದುದ್ದಕ್ಕೂ ಇಂಗ್ಲೆಂಡಿನ ರಾಜನ ಪಟ್ಟಕ್ಕೇರಲು ತಯಾರಿ ನಡೆಸುತ್ತಿದ್ದರು. ಈಗ, 73 ನೇ ವಯಸ್ಸಿನಲ್ಲಿ ಆ ಕ್ಷಣ ಅಂತಿಮವಾಗಿ ಬಂದಿದೆ.

ಬ್ರಿಟಿಷ್ ಸಿಂಹಾಸನವನ್ನು ಅಲಂಕರಿಸಿದ ಅತ್ಯಂತ ಹಿರಿಯ ವ್ಯಕ್ತಿ ಚಾರ್ಲ್ಸ್ ಎನಿಸಿಕೊಳ್ಳಲಿದ್ದಾರೆ. ತಮ್ಮ ತಾಯಿ ಕ್ವೀನ್ ಎಲಿಜಬೆತ್ ನಿಧನ ನಂತರ ಈ ಸಂದರ್ಭ ಬಂದಿದ್ದು ಅವರ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿಯಾಗಿಲ್ಲ.

ಬಾಲ್ಯದಲ್ಲಿ ಪ್ರಾರಂಭವಾದ ಶಿಷ್ಯವೃತ್ತಿಯ ನಂತರ, ಚಾರ್ಲ್ಸ್ ಬ್ರಿಟಿಷ್ ರಾಜಪ್ರಭುತ್ವದ ಆಧುನೀಕರಣವನ್ನು ಸಾಕಾರಗೊಳಿಸಿದರು. ಅವರು ಮನೆಯಲ್ಲಿ ಶಿಕ್ಷಣ ಪಡೆಯದೆ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಗಳಿಸಿದ ಮೊದಲ ರಾಜಕುಮಾರ ಎನಿಸಿದರು. ಮಾಧ್ಯಮದ ನಿರಂತರ ಸುದ್ದಿಗೆ ತೆರೆದಿದ್ದರು. 

ಅವರು ಪ್ರೀತಿಸಿ ವರಿಸಿದ ರಾಜಕುಮಾರಿ ಡಯಾನಾ ಅವರ ಜೊತೆ ವಿಚ್ಛೇದನ ಸಾಕಷ್ಟು ಗೊಂದಲ ಉಂಟುಮಾಡಿತ್ತು. ಇದಕ್ಕೆ ಅನೇಕರು ಕಿಂಗ್ ಚಾರ್ಲ್ಸ ರನ್ನು ದೂರವಿಟ್ಟರು. ಸಾರ್ವಜನಿಕ ವ್ಯವಹಾರಗಳಲ್ಲಿ ರಾಜಮನೆತನದ ಸದಸ್ಯರು ಮಧ್ಯಪ್ರವೇಶಿಸುವುದನ್ನು ನಿಷೇಧಿಸುವ ನಿಯಮಗಳನ್ನು ತಗ್ಗಿಸುವ ಮೂಲಕ, ಪರಿಸರ ಸಂರಕ್ಷಣೆ ಮತ್ತು ವಾಸ್ತುಶಿಲ್ಪದ ಸಂರಕ್ಷಣೆಯಂತಹ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ಮುಳುಗಿದರು.

SCROLL FOR NEXT