ಬ್ರಿಟನ್‌ನ ನೂತನ ರಾಜರಾಗಿ ಚಾರ್ಲ್ಸ್ III ಘೋಷಣೆ 
ವಿದೇಶ

ಐತಿಹಾಸಿಕ ಸಮಾರಂಭದಲ್ಲಿ ಬ್ರಿಟನ್‌ನ ನೂತನ ರಾಜನಾಗಿ ಚಾರ್ಲ್ಸ್ III ಘೋಷಣೆ

ಇತಿಹಾಸದಲ್ಲಿ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾದ ಐತಿಹಾಸಿಕ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಶನಿವಾರ ಬ್ರಿಟನ್‌ನ ಹೊಸ ದೊರೆ ಎಂದು ಘೋಷಿಸಲಾಯಿತು.

ಲಂಡನ್: ಇತಿಹಾಸದಲ್ಲಿ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾದ ಐತಿಹಾಸಿಕ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಶನಿವಾರ ಬ್ರಿಟನ್‌ನ ಹೊಸ ದೊರೆ ಎಂದು ಘೋಷಿಸಲಾಯಿತು.

"ದೇವರೇ ರಾಜನನ್ನು ರಕ್ಷಿಸು (God save the King) ಎಂಬ ಘೋಷಣೆಗಳ ನಡುವೆ ಕಿಂಗ್ ಚಾರ್ಲ್ಸ್ III ಅವರನ್ನು ಶನಿವಾರ ಬ್ರಿಟನ್‌ನ ಹೊಸ ದೊರೆ ಎಂದು ಘೋಷಿಸಲಾಯಿತು. ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ 73 ವರ್ಷ ವಯಸ್ಸಿನ ಮಾಜಿ ರಾಜಕುಮಾರ ಚಾರ್ಲ್ಸ್ III  ಅವರಿಗೆ ವೇಲ್ಸ್‌ಸಿಂಹಾಸನವನ್ನು ನೀಡಲಾಯಿತು. ಗುರುವಾರ ಮತ್ತು ಶನಿವಾರದ ಸಮಾರಂಭದಲ್ಲಿ ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಈ ಔಪಚಾರಿಕ ಘೋಷಣೆ ಮಾಡಲಾಯಿತು.

ಕಿಂಗ್ ಚಾರ್ಲ್ಸ್ ಅವರ ಪತ್ನಿ, ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಮತ್ತು ಅವರ ಮಗ ಮತ್ತು ನೂತನ ರಾಜನ ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ, ವೇಲ್ಸ್‌ನ ಹೊಸ ರಾಜಕುಮಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 
ದಿವಂಗತ ರಾಣಿ ಎಲಿಜಬೆತ್ II ಮರಣದ ಶೋಕಾರ್ಥವಾಗಿ ಅರಮನೆಯ ಮೇಲೆ ಇಳಿಸಲಾದ ಧ್ವಜಗಳನ್ನು ಪ್ರವೇಶ ಮಂಡಳಿಯ ಘೋಷಣೆಯ ನಂತರ ಪೂರ್ಣ ಪ್ರಮಾಣದಲ್ಲಿ ಎತ್ತರಕ್ಕೆ ತರಲಾಯಿತು. ರಾಣಿಗೆ ಸಂತಾಪ ಸೂಚನಾರ್ಥವಾಗಿ ಭಾನುವಾರದಂದು ಬ್ರಿಟನ್ ನಾದ್ಯಂತ ಧ್ವಜಗಳು ಮತ್ತೆ ಅರ್ಧ-ಸ್ತಂಭಕ್ಕೆ ಮರಳುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ರಾಜನಾಗಿ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಮಾತನಾಡಿದ ಪ್ರಿನ್ಸ್ ಚಾರ್ಲ್ಸ್, 'ರಾಣಿ ಸ್ವತಃ ಅಂತಹ ಅಚಲ ಭಕ್ತಿಯಿಂದ ಮಾಡಿದಂತೆಯೇ, ನಾನು ಕೂಡ ಈಗ ನಮ್ಮ ರಾಷ್ಟ್ರದ ಹೃದಯಭಾಗದಲ್ಲಿರುವ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತೇನೆ. ಈ ನಿಟ್ಟಿನಲ್ಲಿ ದೇವರು ನನಗೆ ಶಕ್ತಿ ದಯಪಾಲಿಸುತ್ತಾನೆ. ನನ್ನ ಪ್ರೀತಿಯ ಅಮ್ಮ, ನನ್ನ ಪ್ರೀತಿಯ ದಿವಂಗತ ತಂದೆ ಅವರನ್ನು ಸೇರಲು ನೀವು ನಿಮ್ಮ ಕೊನೆಯ ದೊಡ್ಡ ಪ್ರಯಾಣವನ್ನು ಪ್ರಾರಂಭಿಸಿದ್ದೀರಿ. ನಾನು ಇದನ್ನು ಸರಳವಾಗಿ ಹೇಳಲು ಬಯಸುತ್ತೇನೆ: ಧನ್ಯವಾದಗಳು. ನಮ್ಮ ಕುಟುಂಬಕ್ಕೆ ಮತ್ತು ನೀವು ಸೇವೆ ಸಲ್ಲಿಸಿದ ರಾಷ್ಟ್ರಗಳ ಕುಟುಂಬಕ್ಕೆ ನಿಮ್ಮ ಪ್ರೀತಿ ಮತ್ತು ಭಕ್ತಿಗೆ ಧನ್ಯವಾದಗಳು ಎಂದು ಅವರು ಹೇಳಿದರು.

ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ದಿ ಕಿಂಗ್ಸ್ ಟ್ರೂಪ್ ರಾಯಲ್ ಹಾರ್ಸ್ ಆರ್ಟಿಲರಿಯಿಂದ ಹಾರಿಸಲಾದ 41-ಗನ್ ಸೆಲ್ಯೂಟ್‌ನೊಂದಿಗೆ ಸೇಂಟ್ ಜೇಮ್ಸ್ ಪ್ಯಾಲೇಸ್‌ನಲ್ಲಿರುವ ಫ್ರೈರಿ ಕೋರ್ಟ್‌ನ ಮೇಲಿರುವ ಬಾಲ್ಕನಿಯಿಂದ ಗಾರ್ಟರ್ ಕಿಂಗ್ ಆಫ್ ಆರ್ಮ್ಸ್ ಅವರು ಸಾರ್ವಜನಿಕವಾಗಿ ಮೊದಲ ಬಾರಿಗೆ ಪ್ರಧಾನ ಘೋಷಣೆಯನ್ನು ಓದಿದರು.

ರಾಜನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಿಂಗ್ ಚಾರ್ಲ್ಸ್ III ತಮ್ಮ ಮೊದಲ ಪ್ರಿವಿ ಕೌನ್ಸಿಲ್ ಸಭೆಯನ್ನು ನಡೆಸಿದರು. ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಪ್ರತಿಜ್ಞೆ ಮಾಡಿದರು. ಅಂತೆಯೇ ದಿವಂಗತ ತಾಯಿ ರಾಣಿ ಎಲಿಜೆಬೆತ್ ರ ಹೆಜ್ಜೆಗಳನ್ನು ಅನುಸರಿಸಲು ಅವರ ವೈಯಕ್ತಿಕ ಘೋಷಣೆಯನ್ನು ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT