ವಿದೇಶ

ಕೆನಡಾದ ಸ್ವಾಮಿ ನಾರಾಯಣ್ ದೇವಾಲಯದಲ್ಲಿ ಭಾರತ ವಿರೋಧಿ ಬರಹ, ದೇವಾಲಯಕ್ಕೆ ಹಾನಿ

Srinivas Rao BV

ಕೆನಡಾ: ಕೆನಡಾದಲ್ಲಿ ಖಾಲಿಸ್ಥಾನಿ ತೀವ್ರಗಾಮಿಗಳು ಸ್ವಾಮಿ ನಾರಾಯಣ್ ದೇವಾಲಯದ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದಾರೆ.

ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಹಾಕಿದ್ದು, ಟೋರಂಟೋದಲ್ಲಿರುವ ಭಾರತೀಯ ಮಿಷನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತ್ವರಿತಗತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. 

ಬಿಎಪಿಎಸ್ ಸ್ವಾಮಿ ನಾರಾಯಣ್ ಮಂದಿರದಲ್ಲಿ ನಡೆದ ದಾಳಿಯ ಸಮಯ ಇನ್ನಷ್ಟೇ ತಿಳಿಯಬೇಕಿದೆ. "ಸ್ವಾಮಿ ನಾರಾಯಣ್ ಮಂದಿರದ ಮೇಲಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ಕ್ಷಿಪ್ರಗತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಕೆನಡಾ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ" ಎಂದು ಭಾರತ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ನ್ಯೂಯಾರ್ಕ್: ಹಿಂದೂ ದೇವಾಲಯದ ಹೊರಗಿನ ಗಾಂಧಿ ಪ್ರತಿಮೆ ಧ್ವಂಸ
 
ಈ ಬಗ್ಗೆ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಮಾತನಾಡಿ, ಖಾಲಿಸ್ಥಾನಿ ತೀವ್ರಗಾಮಿಗಳು ಟೊರಂಟೋದ ಸ್ವಾಮಿ ನಾರಾಯಣ್ ಮಂದಿರ ಧ್ವಂಸಗೊಳಿಸಿರುವುದನ್ನು ನಾವೆಲ್ಲರೂ ಖಂಡಿಸಬೇಕು. ಇದು ಕೇವಲ ಮತ್ತೊಂದು ಘಟನೆಯಲ್ಲ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ದ್ವೇಷ ಅಪರಾಧಗಳ ಮೂಲಕ ಹಿಂದೂ ದೇವಾಲಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

SCROLL FOR NEXT