ವಿದೇಶ

ಚೀನಾದಲ್ಲಿ ಹೊತ್ತಿ ಉರಿದ ಬೃಹತ್ ಕಟ್ಟಡ: ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ, ಭಯಾನಕ ವಿಡಿಯೋ!

Vishwanath S

ಬೀಜಿಂಗ್: ಮಧ್ಯ ಚೀನಾದ ನಗರವಾದ ಚಾಂಗ್‌ಶಾದಲ್ಲಿನ ಗಗನಚುಂಬಿ ಕಟ್ಟಡದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಸಾವುನೋವುಗಳ ಸಂಖ್ಯೆ ಪ್ರಸ್ತುತ ತಿಳಿದಿಲ್ಲ ಎಂದು ಹೇಳಿದೆ.

ಬೆಂಕಿ ಹೊತ್ತಿರುವ ಪ್ರದೇಶದಿಂದ ದಟ್ಟವಾದ ಹೊಗೆ ಉಗುಳುತ್ತಿದೆ. ಮತ್ತು ಹಲವಾರು ಡಜನ್ ಮಹಡಿಗಳು ಜೋರಾಗಿ ಉರಿಯುತ್ತಿವೆ ಎಂದು ರಾಜ್ಯ ಬ್ರಾಡ್‌ಕಾಸ್ಟರ್ ಸಿಸಿಟಿವಿ ವರದಿ ಮಾಡಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ. 

ಇನ್ನು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ ಎತ್ತರದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ತಿಳಿಸಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ನಗರ ಪ್ರದೇಶದಲ್ಲಿನ ಕಟ್ಟಡವೊಂದು ಹೊತ್ತಿ ಉರಿಯುತ್ತಿದ್ದು ಕಪ್ಪು ಹೊಗೆ ಆಕಾಶವನ್ನು ಮುತ್ತುವಂತಿದೆ. 

ಸ್ಥಳೀಯ ಸುದ್ದಿವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಗೋಪುರದ ಹೊರಭಾಗವು ಕಪ್ಪು ಸುಟ್ಟುಹೋಗಿರುವುದು ಕಾಣಿಸುತ್ತದೆ.

ಹುನಾನ್ ಪ್ರಾಂತ್ಯದ ರಾಜಧಾನಿಯಾದ ಚಾಂಗ್ಶಾದಲ್ಲಿ ಸುಮಾರು 10 ಮಿಲಿಯನ್ ಜನರು ವಾಸಿಸುತ್ತಿದ್ದಾರೆ.

SCROLL FOR NEXT