ವಿದೇಶ

ಹೊಸ ಬಾಹ್ಯಾಕಾಶ ನಿಲ್ದಾಣದಿಂದ ಚೀನಾ ಗಗನಯಾತ್ರಿಗಳ ಸ್ಪೇಸ್ ವಾಕ್

Srinivas Rao BV

ಬೀಜಿಂಗ್: ಚೀನಾದ ಇಬ್ಬರು ಗಗನಯಾತ್ರಿಗಳು ಶನಿವಾರದಂದು ಹೊಸ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ ವಾಕ್ ಗೆ ತೆರಳಿದ್ದಾರೆ. ಹೊಸ ಬಾಹ್ಯಾಕಾಶ ನಿಲ್ದಾಣ ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
 
ಕಾಯ್ ಜೂಸ್ಟೇ ಹಾಗೂ ಚೆನ್ ಡಾಂಗ್ ಎಂಬ ಇಬ್ಬರು ಗಗನಯಾತ್ರಿಗಳು ಹೊಸ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ ವಾಕ್ ಕೈಗೊಂಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅಮೇರಿಕಾ ಚೀನಾವನ್ನು ಹೊರಗಿಟ್ಟಿರುವ ಹಿನ್ನೆಲೆಯಲ್ಲಿ ಚೀನಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತಿದೆ. ಚೀನಾದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಲ್ಲಿ ಅಮೇರಿಕ ಕಾರ್ಯತಂತ್ರದ ಸವಾಲುಗಳಿವೆ ಎಂಬ ಅಭಿಪ್ರಾಯ ಹೊಂದಿದೆ. 

ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಇತ್ತೀಚಿನ ಸ್ಪೇಸ್ ವಾಕ್ 6 ತಿಂಗಳ ಅವಧಿಯಲ್ಲಿ ಎರಡನೇಯದ್ದಾಗಿದೆ. ಎರಡು ಪ್ರಯೋಗಾಲಯಗಳ ಪೈಕಿ, 23 ಟನ್ ಗಳ ಘಟಕದ ಮೊದಲನೆಯದ್ದನ್ನು ಜುಲೈ ನಲ್ಲಿ ನಿಲ್ದಾಣಕ್ಕೆ ಸೇರಿಸಲಾಗಿತ್ತು, ಮತ್ತೊಂದನ್ನು ಈ ವರ್ಷಾಂತ್ಯಕ್ಕೆ ಸೇರಿಸಲಾಗುತ್ತದೆ. 

ಸಿಬ್ಬಂದಿಗಳ ಪೈಕಿ ಮೂರನೇ ಗಗನಯಾತ್ರಿ ಇನ್ನಿಬ್ಬರು ಗಗನಯಾತ್ರಿಗಳಿಗೆ ಬಾಹ್ಯಾಕಾಶದ ಒಳಭಾಗದಿಂದ ಸ್ಪೇಸ್ ವಾಕ್ ಗೆ ಸಹಾಯ ಮಾಡಿದರು. ಎರಡು ವಾರಗಳ ಹಿಂದೆ ಲಿಯು ಮತ್ತು ಚೆನ್ ಮೊದಲ ಸ್ಪೇಸ್ ವಾಕ್ ಮಾಡಿದ್ದರು. 

ಮಿಷನ್ ಪೂರ್ಣಗೊಳ್ಳುವ ವೇಳೆಗೆ ಇವರೊಂದಿಗೆ ಇನ್ನೂ ಮೂವರು ಗಗನಯಾತ್ರಿಗಳು ಸೇರ್ಪಡೆಯಾಗಲಿದ್ದು, ಮೊದಲ ಬಾರಿಗೆ ಒಟ್ಟಿಗೆ 6 ಮಂದಿ ಗಗನಯಾತ್ರಿಗಳು ಇರಲಿದ್ದಾರೆ. 2003 ರಲ್ಲಿ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದ ಮೂರನೇ ರಾಷ್ಟ್ರವಾಗಿತ್ತು ಚೀನಾ.

SCROLL FOR NEXT