ವಿದೇಶ

ಉಕ್ರೇನ್ ಸಂಘರ್ಷ ಅತ್ಯಂತ ಆತಂಕಕಾರಿ; ಯುದ್ಧ ನಿಲ್ಲಿಸಲು ಯುಎನ್ಎಸ್ ಸಿಯಲ್ಲಿ ಜೈಶಂಕರ್ ಕರೆ

Srinivas Rao BV

ವಿಶ್ವಸಂಸ್ಥೆ: ಉಕ್ರೇನ್ ನ ಸಂಘರ್ಷ ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅತ್ಯಂತ ಆತಂಕಕಾರಿಯಾದ ವಿಷಯ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದು, ಹೇಳಿದ್ದಾರೆ. 

ಉಕ್ರೇನ್ ಸಂಘರ್ಷದ ಪರಿಣಾಮವನ್ನು ಬೆಲೆ ಏರಿಕೆ ಹಾಗೂ ಆಹಾರ ಧಾನ್ಯ ಹಾಗೂ ರಸಗೊಬ್ಬರ, ಇಂಧನದ ಬೆಲೆ ಏರಿಕೆ ರೂಪದಲ್ಲಿ ಜಗತ್ತು ಅನುಭವಿಸಿದೆ ಎಂದು ಹೇಳಿದ್ದಾರೆ.

ಯುಎನ್ಎಸ್ ಸಿ ಸಭೆಯಲ್ಲಿ ಉಕ್ರೇನ್ ವಿಷಯವಾಗಿ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಸಂಘರ್ಷವನ್ನು ಕೊನೆಗಾಣಿಸಿ, ಮಾತುಕತೆಗೆ ಹಿಂತಿರುಗಿಸುವುದು ಈಗಿನ ತುರ್ತು ಅಗತ್ಯ, ಈ ಪರಿಷತ್ ರಾಜತಾಂತ್ರಿಕತೆಯ ಅತ್ಯಂತ ಶಕ್ತಿಶಾಲಿ ಚಿಹ್ನೆಯಾಗಿದೆ, ಇದು ತನ್ನ ಉದ್ದೇಶಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷರೊಂದಿಗಿನ ಭೇಟಿಯ ವೇಳೆ ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಜೈಶಂಕರ್ ನೆನಪಿಸಿಕೊಂಡಿದ್ದಾರೆ. ಯುಎನ್ಎಸ್ ಸಿ ಸಭೆಯಲ್ಲಿ ಇತರ ದೇಶಗಳ ವಿದೇಶಾಂಗ ಮಂತ್ರಿಗಳೊಂದಿಗೆ ಜೈಶಂಕರ್ ಭಾಗವಹಿಸಿದ್ದರು.

ಉಕ್ರೇನ್ ಸಂಘರ್ಷದ ಪರಿಣಾಮವನ್ನು ಬೆಲೆ ಏರಿಕೆ ಹಾಗೂ ಆಹಾರ ಧಾನ್ಯ ಹಾಗೂ ರಸಗೊಬ್ಬರ, ಇಂಧನದ ಬೆಲೆ ಏರಿಕೆ ರೂಪದಲ್ಲಿ ಜಗತ್ತು ಅನುಭವಿಸಿದೆ. ಆದ್ದರಿಂದಲೇ ಭಾರತ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಸಲಹೆ ನೀಡುತ್ತಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

SCROLL FOR NEXT