ವಿದೇಶ

ಮಾಂಸ ಸೇವಿಸುವ ಪುರುಷರ ವಿರುದ್ಧ ಸೆಕ್ಸ್ ಮುಷ್ಕರ ಮಾಡಿ; ಮಹಿಳೆಯರಿಗೆ ಪೇಟಾ ಕರೆ!

Lingaraj Badiger

ಜರ್ಮನಿ: ಮಾಂಸ ಸೇವಿಸುವ ಪುರುಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೇಟಾ, ಜಗತ್ತಿನಲ್ಲಿ ಮಾಂಸ ಸೇವನೆಯನ್ನು ಕಡಿಮೆ ಮಾಡಲು ಮಾಂಸ ತಿನ್ನುವ ಪುರುಷರನ್ನು ಲೈಂಗಿಕತೆಯಿಂದ ನಿಷೇಧಿಸಬೇಕೆಂದು ಒತ್ತಾಯಿಸಿದೆ.

ಪೇಟಾ ಇಂಥ ಕರೆಕೊಡಲು ಅದರದೇ ಕಾರಣ ನೀಡಿದ್ದು, “ಪುರುಷರು  ಶೇಕಡ 40 ರಷ್ಟು ಇಂಗಾಲವನ್ನು ಹೊಂದಿದ್ದಾರೆ. ಏಕೆಂದರೆ ಅವರು ಮಹಿಳೆಗಿಂತ ಹೆಚ್ಚು ಮಾಂಸವನ್ನು ತಿನ್ನುತ್ತಾರೆ.”  ಅವರು ಕೆಂಪು ಮಾಂಸವನ್ನು ತಿನ್ನುವುದನ್ನು ನಿಲ್ಲಿಸುವವರೆಗೆ ಮಹಿಳೆಯರು ತಮ್ಮ ಗಂಡ ಮತ್ತು ಗೆಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಪೇಟಾ (PETA) ಪ್ರತಿನಿಧಿ ಡಾ ಕ್ಯಾರಿಸ್ ಬೆನೆಟ್ ಜರ್ಮನಿಯ ಟೈಮ್ಸ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಹಿಳೆಯರಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಮಾಂಸವನ್ನು ತಿನ್ನುವ ಮೂಲಕ ಪುರುಷರು ಹವಾಮಾನ ವಿಪತ್ತಿಗೆ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆಯಂತೆ. ಇದರ ಆಧಾರದ ಮೇಲೆ, ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್,( ಪೇಟಾ) ಮಾಂಸ ಸೇವಿಸುವ ಪುರುಷರ ವಿರುದ್ಧ ಲೈಂಗಿಕ ಮುಷ್ಕರ ನಡೆಸುವಂತೆ ಜಗತ್ತಿನಾದ್ಯಂತ ಮಹಿಳೆಯರಿಗೆ ಕರೆ ನೀಡಿದೆ.

ಮಾಂಸ ತಿನ್ನುವ ಪುರುಷರ ಮೇಲೆ ಮಹಿಳೆಯರು ಲೈಂಗಿಕ ನಿಷೇಧವನ್ನು ಹೇರುವುದು “ಜಗತ್ತನ್ನು ಉಳಿಸುತ್ತದೆ” ಮತ್ತು “ವಿಷಕಾರಿ ಪುರುಷತ್ವವನ್ನು” ನಿಗ್ರಹಿಸುತ್ತದೆ ಎಂದು ಸಂಸ್ಥೆ ನಂಬಿದೆ.

“PLOS ONE ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಮಹಿಳೆಯರಿಗಿಂತ ಮುಖ್ಯವಾಗಿ ಮಾಂಸ ಸೇವನೆಯ ಮೂಲಕ ಪುರುಷರು ಹವಾಮಾನ ವೈಪರಿತ್ಯಕ್ಕೆ ಅಧಿಕ ಕೊಡುಗೆ ನೀಡುತ್ತಾರೆ ಎಂದು ಹೇಳಿದೆ..ಈ ಮಾದರಿ ಆಹಾರ ಪದ್ಧತಿಯು ಶೇಕಡಾ 41 ರಷ್ಟು ಹೆಚ್ಚು ಹಸಿರುಮನೆ ಅನಿಲಗಳಿಗೆ ಕಾರಣವಾಗುತ್ತದೆ ಎಂದು ಪೇಟಾ ಅಭಿಪ್ರಾಯಪಟ್ಟಿದೆ

ನಿರ್ದಿಷ್ಟ ಪ್ರಕಾರದ ಪುರುಷರ ಆಹಾರದ ಅಭ್ಯಾಸದ ಬಗ್ಗೆ ಪೇಟಾ ಉಲ್ಲೇಖಿಸುತ್ತಾ, ಅವರ ಆಹಾರಾಭ್ಯಾಸದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ - ಕೈಯಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದಿರುವ ಪುರುಷರು, ತಮ್ಮ ದುಬಾರಿ ಗ್ಯಾಸ್ ಗ್ರಿಲ್ಗಳಲ್ಲಿ ಸಾಸೇಜ್ಗಳನ್ನು ಇಕ್ಕಳ ಬಳಸಿ ಆನಂದಿದಿಂದ ಬೇಯಿಸುತ್ತಾರೆ.” ಜನರು ತಮ್ಮ ಮಾಂಸವನ್ನು ಚಾರ್ ಮಾಡಲು ಬಾರ್ಬೆಕ್ಯೂ ಅನ್ನು ಬಳಸುತ್ತಾರೆ. ಅವರ ಈ ಆಹಾರ ಪ್ರವೃತ್ತಿ ” ಪ್ರಾಣಿಗಳಿಗೆ ಮಾತ್ರವಲ್ಲದೆ ಗ್ರಹಕ್ಕೂ ಹಾನಿಯನ್ನುಂಟು ಮಾಡುತ್ತದೆ ಎಂದು  ಹೇಳಿದೆ.

ಟೆಲಿಗ್ರಾಫ್ ವರದಿಯ ಪ್ರಕಾರ, ಲೈಂಗಿಕ ಮುಷ್ಕರದ ಕಲ್ಪನೆಗೆ ಕಾರಣ ತೀವ್ರ ಮಾಂಸಾಹಾರದ ಅಭ್ಯಾಸ. ಪೇಟಾದ ಜರ್ಮನಿಯ ಶಾಖೆಯ ಡೇನಿಯಲ್ ಕಾಕ್ಸ್, ಪುರುಷರ ತೀವ್ರ ಮಾಂಸಹಾರ ಪ್ರವೃತ್ತಿಯು ಹವಾಮಾನಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಇಂಥ ಪುರುಷರ ಮೇಲೆ ಶೇಕಡ 41ರಷ್ಟು ಹೆಚ್ಚು ಮಾಂಸ ತೆರಿಗೆಯನ್ನು ವಿಧಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT