ವಿದೇಶ

ಇರಾನ್‌: ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮುಂದುವರಿಕೆ; ನವೆಂಬರ್ ನಿಂದ ಸುಮಾರು 5,000 ಪ್ರಕರಣ ವರದಿ

Nagaraja AB

ಟೆಹ್ರಾನ್: ಕೆಲವು ತಿಂಗಳುಗಳಿಂದ ಇರಾನ್ ದೇಶವನ್ನು ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನ ಮುಂದುವರೆದಿದ್ದು, ಶನಿವಾರ ಹಲವಾರು ಶಾಲೆಗಳಲ್ಲಿ ಡಜನ್ ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನವೆಂಬರ್ ಅಂತ್ಯದಿಂದ ಅನೇಕ ಶಾಲೆಗಳಲ್ಲಿ ಹೆಚ್ಚಾಗಿ ಬಾಲಕಿಯರೇ ದಿಢೀರನೇ ವಿಷ ಪ್ರಾಷನ ಪ್ರಕರಣಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 

ತೈಲ-ಸಮೃದ್ಧ ನೈಋತ್ಯ ಪ್ರಾಂತ್ಯದ ಖುಜೆಸ್ತಾನ್‌ನ  ಹಾಫ್ಟ್ಕೆಲ್ ಪಟ್ಟಣದ ಬಾಲಕಿಯರ ಶಾಲೆಯಲ್ಲಿ ಕನಿಷ್ಠ 60 ವಿದ್ಯಾರ್ಥಿನಿಯರು  ವಿಷ ಸೇವಿಸಿದ್ದಾರೆ ಎಂದು ಐಆರ್ ಐಬಿ ಸರ್ಕಾರಿ ನ್ಯೂಸ್ ಏಜೆನ್ಸಿ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

"ವಾಯುವ್ಯದ ಅರ್ದಾಬಿಲ್‌ನಲ್ಲಿರುವ ಐದು ಶಾಲೆಗಳಲ್ಲಿ  ಹಲವಾರು ಶಾಲಾಮಕ್ಕಳು ವಿಷ ಸೇವಿಸಿದ್ದು, ಆತಂಕ, ಉಸಿರಾಟದ ತೊಂದರೆ ಮತ್ತು ತಲೆ ನೋವು ರೋಗ ಲಕ್ಷಣಗಳು ಕಂಡುಬಂದಿವೆ ಎಂದು ಪ್ರಾಂತೀಯ ವೈದ್ಯಕೀಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಮಾರ್ಚ್ 7 ರಂದು ನೀಡಲಾಗಿರುವ ಅಧಿಕೃತ ಮಾಹಿತಿ ಪ್ರಕಾರ, ಇರಾನ್ ನ 31 ಪ್ರಾಂತ್ಯಗಳಲ್ಲಿ 25 ಕಡೆಗಳಲ್ಲಿರುವ 230 ಶಾಲೆಗಳಲ್ಲಿ ಇಂತಹ ವಿಷಪ್ರಾಷನ ಪ್ರಕರಣ ವರದಿಯಾಗಿದ್ದು, ಸುಮಾರು 5,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿಷ ಪ್ರಾಷನಕ್ಕೆ ಒಳಗಾಗಿದ್ದಾರೆ.

SCROLL FOR NEXT