ಕಾಬೂಲ್ ವಿಮಾನ ನಿಲ್ದಾಣದ ದಾಳಿ 
ವಿದೇಶ

2021ರ ಕಾಬೂಲ್ ವಿಮಾನ ನಿಲ್ದಾಣದ ದಾಳಿಯ ಮಾಸ್ಟರ್ ಮೈಂಡ್ ಅನ್ನು ಹೊಡೆದುರುಳಿಸಿದ ತಾಲಿಬಾನ್: ಅಮೆರಿಕ

ಕಾಬೂಲ್ ವಿಮಾನ ನಿಲ್ದಾಣದಲ್ಲಿ 2021 ರಲ್ಲಿ ವಿಧ್ವಂಸಕ ಬಾಂಬ್ ದಾಳಿ ನಡೆಸಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಗುಂಪಿನ ಮಾಸ್ಟರ್ ಮೈಂಡ್ ಅನ್ನು ಆಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಸರ್ಕಾರ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ 2021 ರಲ್ಲಿ ವಿಧ್ವಂಸಕ ಬಾಂಬ್ ದಾಳಿ ನಡೆಸಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಗುಂಪಿನ ಮಾಸ್ಟರ್ ಮೈಂಡ್ ಅನ್ನು ಆಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಸರ್ಕಾರ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕದ ಹಲವು ಮಾಧ್ಯಮಗಳು ಈ ಬಗ್ಗೆ ವರದಿ ಬಿತ್ತರಿಸಿದ್ದು, ಶಂಕಿತ ಉಗ್ರಗಾಮಿ ಗುಂಪು IS-K ನ ಅಫ್ಘಾನ್ ಶಾಖೆಯ ನಾಯಕ ಎಂದು ಗುರುತಿಸಲಾದ ಕಾಬೂಲ್ ವಿಮಾನ ನಿಲ್ದಾಣದಲ್ಲಿ 2021 ರಲ್ಲಿ ವಿಧ್ವಂಸಕ ಬಾಂಬ್ ದಾಳಿಯ ರೂವಾರಿಯನ್ನು ಹೊಡೆದುರುಳಿಸಲಾಗಿದೆ. ಆಫ್ಘಾನಿಸ್ತಾನದ ಆಡಳಿತಾ ರೂಢ ತಾಲಿಬಾನ್ ಪಡೆಗಳು ಈತನನ್ನು ಹೊಡೆದುರುಳಿಸಿವೆ ಎಂದು ಹೇಳಲಾಗಿದೆ. ಆದರೆ ಆತ ಹೇಗೆ ಸತ್ತ.. ಯಾವ ಜಾಗದಲ್ಲಿ ಸತ್ತ.. ಆತನ ಹೆಸರೇನು ಎಂಬುದನ್ನು ಮಾಧ್ಯಮಗಳು ಬಹಿರಂಗ ಪಡಿಸಿಲ್ಲ. 

ಆದರೆ ಉಗ್ರಗಾಮಿ ಸಾವನ್ನು ಸ್ಪಷ್ಟಪಡಿಸಿರುವ CNN ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಅವರು ಇದು ಈ ವರ್ಷ IS-K ನ ಅತಿದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಮೌರಾ ಗಯಾ ಎಂಬ ಉಗ್ರಗಾಮಿ ಆಗಸ್ಟ್ 26, 2021 ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಅಂದು ನಡೆದ ದಾಳಿಯಲ್ಲಿ 13 ಮಂದಿ ಅಮೆರಿಕನ್ ಸಿಬ್ಬಂದಿಗಳು ಮತ್ತು 170 ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದರು. 

ತಾಲಿಬಾನ್ ಕಾರ್ಯಾಚರಣೆಯಲ್ಲಿ ಅಮೆರಿಕ ಅಥವಾ ಅದರ ಸೇನೆ ಭಾಗಿಯಾಗಿಲ್ಲ ಮತ್ತು ಶಂಕಿತನ ಸಾವಿನ ಬಗ್ಗೆ ಆಡಳಿತದಿಂದ ತಿಳಿಸಲಾಗಿಲ್ಲ ಎಂದೂ ವರದಿ ಹೇಳಿದೆ.

ಭಯೋತ್ಪಾದಕರ ಸಾವು ಮತ್ತು ಗುರುತಿನ ದೃಢೀಕರಣವು US ನ ಸ್ವಂತ ಗುಪ್ತಚರವನ್ನು ಆಧರಿಸಿದೆ.

ಬಹಿರಂಗವಾಗಿದ್ದು ಹೇಗೆ?
ಭಯೋತ್ಪಾದಕನ ಸಾವಿನ ಬಗ್ಗೆ ತಿಳಿಸಲು ಅಮೆರಿಕ ಅಧಿಕಾರಿಗಳು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಅಮೇರಿಕನ್ ಸೈನಿಕರ ಸಂಬಂಧಿಕರಿಗೆ ಕರೆ ಮಾಡಲು ಪ್ರಾರಂಭಿಸಿದರು. "ಅವರು ನನಗೆ ಭಯೋತ್ಪಾದಕನ ಹೆಸರನ್ನು ಹೇಳಲು ಸಾಧ್ಯವಿಲ್ಲ, ಕಾರ್ಯಾಚರಣೆಯ ವಿವರಗಳನ್ನು ನನಗೆ ಹೇಳಲು ಸಾಧ್ಯವಿಲ್ಲ" ಎಂದು ಯುಎಸ್ ಮೆರೈನ್ ಕಾರ್ಪ್ಸ್‌ನ ಟೇಲರ್ ಹೂವರ್ ಅವರ ತಂದೆ ಡಾರಿನ್ ಹೂವರ್ ಹೇಳಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT