ಸುಧಾ ಮೂರ್ತಿ 
ವಿದೇಶ

ನನ್ನ ಮಗಳು ಅಕ್ಷತಾ ಮೂರ್ತಿ ತನ್ನ ಗಂಡನನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ: ಸುಧಾ ಮೂರ್ತಿ

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸುಧಾ ಮೂರ್ತಿಯವರು ತಮ್ಮ ಮಗಳಿಂದಾಗಿ ರಿಷಿ ಸುನಕ್ ಯುಕೆಯ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. 'ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ, ನನ್ನ ಮಗಳು ಆಕೆಯ ಪತಿಯನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದ್ದಾಳೆ' ಎಂದು ಹೇಳಿಕೊಂಡಿದ್ದಾರೆ.

ಲಂಡನ್: ತಮ್ಮ ಮಗಳು ಅಕ್ಷತಾ ಮೂರ್ತಿ 'ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ' ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸುಧಾ ಮೂರ್ತಿಯವರು ತಮ್ಮ ಮಗಳಿಂದಾಗಿ ರಿಷಿ ಸುನಕ್ ಯುಕೆಯ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. 'ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ, ನನ್ನ ಮಗಳು ಆಕೆಯ ಪತಿಯನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದ್ದಾಳೆ' ಎಂದು ಹೇಳಿಕೊಂಡಿದ್ದಾರೆ.

'ಇದೆಲ್ಲದಕ್ಕೂ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ಗಂಡನನ್ನು ಹೇಗೆಲ್ಲಾ ಬದಲಾಯಿಸಬಹುದು ಎಂಬುದನ್ನು ನೋಡಿ. ಆದರೆ, ನನ್ನ ಗಂಡನನ್ನು ನಾನು ಬದಲಾಯಿಸಲು ಸಾಧ್ಯವಾಗಲಿಲ್ಲ. ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ ಮತ್ತು ನನ್ನ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ' ಎಂದು ಸುಧಾ ಮೂರ್ತಿ ಹೇಳಿರುವುದನ್ನು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕಾಣಬಹುದು.

ರಿಷಿ ಸುನಕ್ 2009 ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು ಮತ್ತು ನಂತರದ ವರ್ಷಗಳಲ್ಲಿ ಯುಕೆಯ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು.

ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ. ಇವರು ಸುಮಾರು 730 ಮಿಲಿಯನ್ ಪೌಂಡ್ ವೈಯಕ್ತಿಕ ಸಂಪತ್ತನ್ನು ಹೊಂದಿದ್ದು, ಶಕ್ತಿಶಾಲಿ ಮಹಿಳೆ ಎನಿಸಿಕೊಂಡಿದ್ದಾರೆ. ಆಕೆಯ ಪೋಷಕರು, ಭಾರತ ಮೂಲದವರಾಗಿದ್ದು, ಶತಕೋಟಿ ಮೌಲ್ಯದ ಟೆಕ್ ಕಂಪನಿಯಾದ ಇನ್ಫೋಸಿಸ್ ಅನ್ನು ಹೊಂದಿದ್ದಾರೆ.

ಅಕ್ಷತಾ ಮೂರ್ತಿಯವರ ತಂದೆ ನಾರಾಯಣ ಮೂರ್ತಿ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇನ್ಫೋಸಿಸ್ ಟೆಕ್ ಕಂಪನಿಯ ಸ್ಥಾಪಕರು.

ಸುನಕ್ ಅವರು 42ನೇ ವಯಸ್ಸಿನಲ್ಲಿ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಯುಕೆಯ ಪ್ರಧಾನಿಯಾಗಿದ್ದಾರೆ ಮತ್ತು ಸಂಸದರಾದ ಕೇವಲ ಏಳು ವರ್ಷಗಳಲ್ಲಿ ಪ್ರಧಾನಿಯಾಗಿದ್ದಾರೆ.

ಮುಂದುವರಿದು, ಸುಧಾ ಮೂರ್ತಿ ಅವರು, ತಮ್ಮ ಮಗಳು ಪ್ರಧಾನಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ, ವಿಶೇಷವಾಗಿ ಅವರ ಆಹಾರಕ್ರಮದಲ್ಲಿ ಎಂಬುದರ ಕುರಿತು ಮಾತನಾಡಿದ್ದಾರೆ. ನಮ್ಮ ಕುಟುಂಬವು ಪ್ರತಿ ಗುರುವಾರ ಉಪವಾಸ ಮಾಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ ಎಂದು ಹೇಳುತ್ತಾರೆ.

ಗುರುವಾರವೇ ಏಕೆ ಉಪವಾಸ ಮಾಡಬೇಕು ಎನ್ನುವ ಕುರಿತು ಮಾತನಾಡುವ ಅವರು, 'ನಾವು ಇನ್ಫೋಸಿಸ್ ಅನ್ನು ಪ್ರಾರಂಭಿಸಿದ್ದು ಗುರುವಾರ. ಅಷ್ಟೇ ಅಲ್ಲ, ನಮ್ಮ ಅಳಿಯನ ಪೂರ್ವಜರು 150 ವರ್ಷಗಳಿಂದ ಇಂಗ್ಲೆಂಡಿನಲ್ಲಿದ್ದರೂ ಕೂಡ, ಅವರು ತುಂಬಾ ಸಂಪ್ರದಾಯಸ್ಥರು ಮನೆತನದವರು. ಮದುವೆಯಾದ ಮೇಲೆ, ನೀವು ಏನನ್ನಾದರೂ ಹೊಸ ಕೆಲಸ ಶುರುಮಾಡುವಾಗ ಗುರುವಾರವೇ ಯಾಕೆ ಶುರು ಮಾಡಬಾರದು ಎಂದು ಕೇಳಿದ್ದಕ್ಕೆ ಅವರು ನಾವು ರಾಘವೇಂದ್ರ ಸ್ವಾಮಿಗಳ ಬಳಿ ಹೋಗುತ್ತೇವೆ ಎಂದರು. ಒಳ್ಳೆಯ ದಿನ ಎಂದು ಹೇಳಿದ ನಂತರ, ಅವರು ಪ್ರತಿ ಗುರುವಾರ ಉಪವಾಸ ಮಾಡುತ್ತಾರೆ. ನಮ್ಮ ಅಳಿಯನ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ. ಆದರೆ, ನಮ್ಮ ಅಳಿಯ ಗುರುವಾರ ಉಪವಾಸ ಮಾಡುತ್ತಾರೆ' ಎಂದು ಸುಧಾ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಅವರ ಪತ್ನಿಯ ತಂದೆಯ ಬಿಲಿಯನೇರ್ ಸ್ಥಾನಮಾನದ ಕಾರಣದಿಂದಾಗಿ ರಿಷಿ ಸುನಕ್ ಮತ್ತು ಅವರ ಪತ್ನಿ ಪುನರಾವರ್ತಿತ ಪರಿಶೀಲನೆಗೆ ಒಳಪಟ್ಟಿದ್ದಾರೆ. ಇದು ಅವರು ತಮ್ಮ ಕುಟುಂಬದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ ಪ್ರಮಾಣವನ್ನು ಘೋಷಿಸಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT